ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ಆಹ್ವಾನಿತರಿಗೆ ವಾಸ್ತವ್ಯಕ್ಕಾಗಿ ಟೆಂಟ್ ಸಿಟಿ ಸಿದ್ಧ

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ದೇವರ ಪ್ರಾಣ ಪ್ರತಿಷ್ಠೆ ಜನವರಿ ೨೨ರಂದು ನಡೆಯಲಿರು ವಂತೆಯೇ ಕಾರ್ಯಕ್ರಮದ ಆಮಂತ್ರಣ ಲಭಿಸಿದ ಗಣ್ಯರು ಆಯೋಧ್ಯೆಯತ್ತ ತೆರಳತೊಡಗಿದ್ದಾರೆ. ಅವರಿಗಾಗಿ  ವಾಸ್ತವ್ಯ ಹೂಡಲು ಸಕಲ ವ್ಯವಸ್ಥೆ ಏರ್ಪಡಿಸ ಲಾಗಿದೆ. ಏಕ ಕಾಲದಲ್ಲಿ ಹತ್ತು ಸಾವಿರ ಮಂದಿಗೆ ತಂಗಬಹುದಾದ ಟೆಂಟ್ ಸಿಟಿಯನ್ನು ಸಿದ್ಧಪಡಿಸಲಾಗಿದೆ. ಅಯೋಧ್ಯೆ ರೈಲ್ವೇ ನಿಲ್ದಾಣದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಟೆಂಟ್ ಸಿಟಿಯಿದೆ. ೪೫ ಎಕರೆ ಸ್ಥಳದ ಲ್ಲಿರುವ ಈ ಟೆಂಟ್ ಸಿಟಿಗೆ ಅಶೋಕ್ ಸಿಂಪೂಲ್‌ಜೀ ಪೂರಂ ಎಂಬ ಹೆಸರಿಡ ಲಾಗಿದೆ. ಇದಲ್ಲದೆ ಇನ್ನೂ ಹಲವು ವಾಸಸ್ಥಳಗಳನ್ನು ಸಿದ್ಧಪಡಿಸಲಾಗಿದೆ. ಟೆಂಟ್‌ಸಿಟಿಯ ಭದ್ರತೆಯ ಹೊಣೆಗಾರಿಕೆ ಯನ್ನು ಕಲ್ಲಿಕೋಟೆ ಅರಿಕ್ಕೋಡ್ ನಿವಾಸಿಯೂ ಬಜರಂಗದಳದ ಚೆನ್ನೈ ಕ್ಷೇತ್ರೀಯ ಸಂಯೋಜಕ್ ಆಗಿರುವ ಜಿಜೇಶ್ ಪಟ್ಟೇರಿ ಎಂಬವರಿಗೆ ವಹಿಸಿ ಕೊಡಲಾ ಗಿದೆ. ಪ್ರಾಣಪ್ರತಿಷ್ಠೆ ಬಳಿಕ ಜನವರಿ ೨೪ರಿಂದ ಫೆಬ್ರವರಿ ೨೩ರವರೆಗೆ ಸುಮಾರು ೨ ಲಕ್ಷಕ್ಕೂ ಹೆಚ್ಚು ಮಂದಿ ಕ್ಷೇತ್ರ ದರ್ಶನ ನಡೆಸುವರೆಂದು ಅಂದಾಜಿಸಲಾಗಿದೆ.

You cannot copy contents of this page