18ರಿಂದ 30ರ ಮಧ್ಯೆ ಪ್ರಾಯದವರಿಗೆ ಸ್ಕಾಲರ್‌ಶಿಪ್ ‘ಕನೆಕ್ಟ್ ಟು ವರ್ಕ್’ ಯೋಜನೆಯ ರೂಪುರೇಷೆಗೆ ಅಂಗೀಕಾರ

ತಿರುವನಂತಪುರ: ಮುಖ್ಯಮಂತ್ರಿಯ ಕನೆಕ್ಟ್ ಟು ವರ್ಕ್ ಯೋಜನೆಯ ನವೀಕೃತ ರೂಪುರೇಷೆಗೆ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉದ್ಯೋಗ ಸಾಧ್ಯತೆಗಳನ್ನು ಉತ್ತಮ ಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಾಗ ಬಾರದು. ಅರ್ಜಿದಾರ ಕೇರಳದಲ್ಲೇ ಖಾಯಂ ವಾಸವಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷ ಪೂರ್ತಿಯಾಗಿದ್ದು, 30 ವರ್ಷಕ್ಕಿಂತ ಹೆಚ್ಚಾಗಬಾರದು.

ಕೇಂದ್ರ, ರಾಜ್ಯ ಸರಕಾರಿ ಇಲಾಖೆಗಳು, ಕೇಂದ್ರ, ರಾಜ್ಯ ಸಾರ್ವಜನಿಕ ಸಂಸ್ಥೆಗಳು, ಅಂಗೀಕೃತ ವಿ.ವಿ.ಗಳು, ಅಂಗೀಕೃತ ಖಾಸಗಿ ಸಂಸ್ಥೆಗಳು ಎಂಬಿವುಗಳಲ್ಲಿ ತಜ್ಞ ತರಬೇತಿ ಪಡೆಯುವವರು, ಯುಪಿಎಸ್‌ಸಿ, ರಾಜ್ಯ ಪಿಎಸ್‌ಸಿ, ಸರ್ವೀಸ್ ಸೆಲೆಕ್ಷನ್ ಬೋರ್ಡ್ ಸಹಿತ ವಿವಿಧ ಇಲಾಖೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ಸಿದ್ಧತೆಯಲ್ಲಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಹರಾದ ಮೊದಲ ೫ ಲಕ್ಷ ಮಂದಿಗೆ ಸ್ಕಾಲರ್‌ಶಿಪ್ ನೀಡಲಾಗುವುದು. ಎಂಪ್ಲೋಯ್‌ಮೆಂಟ್ ಇಲಾಖೆ ಮೂಲಕ ಆವಿಷ್ಕರಿಸಿ ಜ್ಯಾರಿ ಗೊಳಿಸುವ ಯೋಜನೆಗೆ ಸಂಬಂಧಪಟ್ಟ ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇರವಾಗಿ ಅರ್ಜಿದಾರರ ಖಾತೆಗಳಿಗೆ ಸ್ಕಾಲರ್‌ಶಿಪ್ ಮೊತ್ತ ತಲುಪಲಿದೆ. ಪ್ರತೀ ತಿಂಗಳು 1000 ರೂ.ನಂತೆ 12 ತಿಂಗಳಿಗೆ ಸ್ಕಾಲರ್‌ಶಿಪ್ ಮಂಜೂರು ಮಾಡಲಾಗುವುದು.

RELATED NEWS

You cannot copy contents of this page