ಪ್ರತಾಪನಗರ ಒಳರಸ್ತೆ ಚರಂಡಿ ನಿರ್ಮಾಣಕ್ಕೆ ಚಾಲನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದ ಒಳರಸ್ತೆಯಲ್ಲಿ ಚರಂಡಿ ನಿರ್ಮಾಣ ಕೆಲಸಕ್ಕೆ ನಿನ್ನೆ ಚಾಲನೆ ನೀಡಲಾಗಿದೆ. ಪಂಚಾಯತ್ ಪsಂಡ್‌ನಿAದ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಗೊಳ್ಳಲಿದೆ. ಚರಂಡಿಯ ಅವ್ಯವಸ್ಥೆಯಿಂದ ಮಳೆ ನೀರು ಪೂರ್ತಿ ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆಯಿಂದ ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ನಿರ್ಮಾಣದಿಂದ ಸಮಸ್ಯೆ ಬಗೆ ಹರಿಯಲಿದೆ. ಎರಡು ತಿಂಗಳ ಹಿಂದೆ ಚರಂಡಿ ನಿರ್ಮಾಣಕ್ಕೆ ಹೊಂಡ ತೋಡಿ ಮುಹೂರ್ತ ಮಾಡಲಾಗಿತ್ತು. ಕೆಲಸ ಆರಂಭ ವಿಳಂಬಗೊAಡಿರುವುದು ಸ್ಥಳೀಯರಿಗೆ ಸಮಸ್ಯೆಯÁಗಿತ್ತು. ಅಲ್ಲದೆ ಹೊಂಡ ತೋಡುವ ವೇಳೆ ನೀರಿನ ಪೈಪ್ ಬಿರುಕು ಬಿಟ್ಟು ನೀರು ಪೋಲಾಗುತ್ತಿತ್ತು. ಈ ಬಗ್ಗೆ ‘ಕಾರವಲ್’ ಪತ್ರಿಕೆಯಲ್ಲಿ ಈ ತಿಂಗಳ 6ರಂದು ಫೊಟೋ ಸಹಿತ ವರದಿ ಪ್ರಕಟಿಸಲಾಗಿತ್ತು. ಇದೀಗ ಚರಂಡಿ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದು ಸ್ಥಳೀಯರಲ್ಲಿ ನೆಮ್ಮದಿಯನ್ನುಂಟುಮಾಡಿದೆ. ಸ್ಥಳಕ್ಕೆ ಗುತ್ತಿಗೆ ದಾರ ಸಿದ್ದಿಕ್ ಪತ್ವಾಡಿ, ವಾರ್ಡ್ ಪ್ರತಿನಿದಿs ವಸಂತ ಕುಮಾರ್ ಮಯ್ಯ, ಮಾಜಿ ಸದಸ್ಯೆ ಸುಧಾ ಗಣೇಶ್, ನೀರಾವರಿ ಇಲಾಖೆ ಸಿಬ್ಬಂದಿ ರವಿ ಕೃಷ್ಣನಗರ, ಇಂಜಿನಿಯರ್ ಭೇಟಿ ಪರಿಶೀಲನೆ ನಡೆಸಿದರು. ಚರಂಡಿ ಕಾಮಗಾರಿಯನ್ನು ವ್ಯವಸ್ಥಿತವಾಗಿ ಕೂಡಲೇ ಪೂರ್ತಿ ಗೊಳಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page