ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಮಹೋತ್ಸವದಂಗವಾಗಿ ವಿಶೇಷ ಬೆಡಿ ಪ್ರದರ್ಶನ ಇಂದು ನಡೆಯಲಿದೆ. ಕುಂಬಳೆ ಬೆಡಿ ಎಂದೇ ಪ್ರಸಿದ್ಧವಾದ ಈ ಕಾರ್ಯಕ್ರಮ ಇಂದು ರಾತ್ರಿ 9.45ರಿಂದ ನಡೆಯಲಿದೆ.
ಬೆಳಿಗ್ಗೆ ಉತ್ಸವ ಶ್ರೀಬಲಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ 4.30ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದಿಂದ ನೃತ್ಯ ಸಂಭ್ರಮ, 6ರಿಂದ ಚೆಂಡೆಮೇಳ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಪೂಜೆ, ಶ್ರೀ ಭೂತಬಲಿ ಉತ್ಸವ, ವಿಶೇಷ ಬೆಡಿ ಪ್ರದರ್ಶನದ ಬಳಿಕ ಉತ್ಸವ ಬಲಿ, ಶಯನ, ಕವಾಟ ಬಂಧನ ನಡೆಯಲಿದೆ. ಕುಂಬಳೆ ಚಿರಂಜೀವಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನವರಿಂದ ವಯಲಿನ್ ಫ್ಯೂಶನ್, ಮೆಗಾ ಮ್ಯೂಸಿಕಲ್ ನೈಟ್ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ನಾಳೆ ಬೆಳಿಗ್ಗೆ ೬ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ ೩ರಿಂದ ಉತ್ಸವ ಬಲಿ, ಶೋಭಾಯಾತ್ರೆ, ಶೇಡಿಗುಮ್ಮೆಯಲ್ಲಿ ಅವಭೃತ ಸ್ನಾನ, 4ರಿಂದ ಯಕ್ಷಗಾನ ಬಯಲಾಟ, ರಾತ್ರಿ 7.30ರಿಂದ ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಲಿದೆ. 19ರಂದು ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ, ಎಳನೀರು ಅಭಿಷೇಕ, ಮಹಾಪೂಜೆ, ಶ್ರೀಬಲಿ, ಅನ್ನ ಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, ಭಜನೆ, 7.30ರಿಂದ ಮಹಾಪೂಜೆ, ಶ್ರೀ ಭೂತಬಲಿ ಉತ್ಸವ ನಡೆಯಲಿದೆ.






