ಮಂಡಲ, ಮಕರಜ್ಯೋತಿ ಉತ್ಸವ ಸಮಾಪ್ತಿ: ಶಬರಿಮಲೆ ಕ್ಷೇತ್ರದ ಬಾಗಿಲು ಮುಚ್ಚಿ ಕೀಲಿಕೈ ಹಸ್ತಾಂತರ

ಶಬರಿಮಲೆ: ಮಂಡಲ, ಮಕರ ಜ್ಯೋತಿ ಮಹೋತ್ಸವಕ್ಕೆ ಸಮಾಪ್ತಿ ಹಾಡಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಮುಚ್ಚಲಾಯಿತು. ಪಂದಳಂ ರಾಜಪ್ರತಿನಿಧಿ ಪುನರ್ತಂನಾಳ್ ನಾರಾಯಣವರ್ಮರವರ ಕ್ಷೇತ್ರ ಭೇಟಿಯ ಬಳಿಕ ಬೆಳಿಗ್ಗೆ 6.45ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. 5 ಗಂಟೆಗೆ ಬಾಗಿಲು ತೆರೆದು ಗಣಪತಿ ಹೋಮ ನಡೆಸಲಾಯಿತು. ಬಳಿಕ ಚಿನ್ನಾಭರಣಗಳನ್ನು ವಾಪಸ್ ಅರಮನೆಗೆ ಕೊಂಡೊಯ್ಯುವ ಶೋಭಾಯಾತ್ರೆ ಆರಂಭಗೊಂಡಿತು. ಪೆರಿಯ ಸ್ವಾಮಿ ಮರುದವನ ಶಿವನ್‌ಕುಟ್ಟಿಯವರ ನೇತೃತ್ವದಲ್ಲಿ ೩೦ ಮಂದಿಯ ತಂಡ ಚಿನ್ನಾಭರಣಗಳ ಜೊತೆ ಅರಮನೆಗೆ ಹಿಂತಿರುಗಿದೆ.

ಈ ತಿಂಗಳ ೨೩ರಂದು ಇದು ಅರಮನೆಗೆ ತಲುಪಲಿದೆ. ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿ ಅಯ್ಯಪ್ಪ ವಿಗ್ರಹದಲ್ಲಿ ವಿಭೂತಿ ಅಭಿಷೇಕ ನಡೆಸಿದರು. ಹರಿವರಾಸನಂ ಸ್ತುತಿಸಿ ಬೆಳಕು ನಂದಿಸಿ ಗರ್ಭಗುಡಿಯ ಬಾಗಿಲು ಮುಚ್ಚಿ ಕೀಲಿಕೈಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ೧೮ನೇ ಮೆಟ್ಟಿಲು ಬಳಿ ಆಚಾರಪರವಾದ ಕಾರ್ಯಕ್ರಮಗಳನ್ನು ನಡೆಸಿ ದೇವಸ್ವಂ ಎಕ್ಸಿಕ್ಯೂಟಿವ್ ಆಧಿಕಾರಿ ಒ.ಜಿ. ಬಿಜು, ಪ್ರಧಾನ ಅರ್ಚಕರ  ನೇತೃತ್ವದಲ್ಲಿ ಕೀಲಿಕೈಯನ್ನು ಶಬರಿಮಲೆ ಎಡ್ಮಿನಿಸ್ಟ್ರೇಟಿವ್ ಅಧಿಕಾರಿ ಎಸ್. ಶ್ರೀನಿವಾಸನ್‌ರಿಗೆ ರಾಜಪ್ರತಿನಿಧಿ ಹಸ್ತಾಂತರಿಸಿದರು.

RELATED NEWS

You cannot copy contents of this page