ಆಲಪ್ಪುಳ: ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡುತ್ತಿದ್ದಾಗ ಅದರಿಂದ ಕಳವು ನಡೆಸಲೆತ್ನಿಸಿದ ದೇವಸ್ವಂ ಮಂಡಳಿಯ ನೌಕರ ಸೆರೆಗೀಡಾಗಿದ್ದಾನೆ. ಕಾಂಗ್ರೆಸ್ ಪ್ರಾದೇಶಿಕ ನೇತಾರ ಹರಿಪ್ಪಾಡ್ ಕುಮಾರಪುರಂ ನಿವಾಸಿ ರಾಗೇಶ್‌ಕೃಷ್ಣ ಎಂಬಾತನನ್ನು ದೇವಸ್ವಂ ವಿಜಿಲೆನ್ಸ್ ಕೈಯ್ಯಾರೆ ಸೆರೆಹಿಡಿದಿದೆ. ಹರಿಪ್ಪಾಡ್ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಕಾಣಿಕೆ ಹುಂಡಿಯ 35 ಸಾವಿರ ರೂಪಾಯಿಗಳನ್ನು ಈತ ಅಪಹರಿಸಲೆತ್ನಿಸಿರುವುದಾಗಿ ದೂರಲಾಗಿದೆ. ಹಣ ಎಣಿಕೆ ಮಾಡುತ್ತಿದ್ದಂತೆ ಇಷ್ಟು ಮೊತ್ತವನ್ನು ಈತ ಬ್ಯಾಗ್‌ಗೆ ತುಂಬಿಸಿಕೊಂಡಿ ದ್ದಾನೆನ್ನಲಾಗಿದೆ. 20ರಷ್ಟು ನೌಕರರು ಎಣಿಕೆ ಮಾಡಿದ ಹಣವನ್ನು ಬ್ಯಾಂಕ್ ನೌಕರರಿಗೆ ಹಸ್ತಾಂತರಿಸಲು ಕೊಂಡೊಯ್ಯುತ್ತಿದ್ದಂತೆ ರಾಗೇಶ್ ಸಂಶಯಾಸ್ಪದವಾಗಿ ವರ್ತಿಸಿದ್ದು, ಇದನ್ನು ಗಮನಿಸಿದ ವಿಜಿಲೆನ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಇದರಿಂದ ಈತನ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಕುಮಾರಪುರಂ ಮಂಡಲ ಮಾಜಿ ಅಧ್ಯಕ್ಷನಾಗಿದ್ದ ರಾಗೇಶ್‌ಕೃಷ್ಣ ೨೦೨೧ರಲ್ಲಿ ಕುಮಾರಪುರಂ ಪಂಚಾಯತ್‌ನಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು.







