ಕಲ್ಲಿಕೋಟೆ: ಬಸ್‌ನಲ್ಲಿ ಲೈಂಗಿಕ ಆಕ್ರಮಣ ನಡೆಸಿರುವುದಾಗಿ ಪ್ರಚಾರಗೊಂಡ ಬೆನ್ನಲ್ಲೇ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಶಿಂಜಿತ ಮುಸ್ತಫ ಸೆರೆಯಾಗಿದ್ದಾಳೆ. ವಡಗರದ ಸಂಬಂಧಿಕರ ಮನೆಯಿಂದ ಯುವತಿ ಸೆರೆಗೀಡಾಗಿದ್ದಾಳೆ. ಈಕೆಯನ್ನು ಕೂಡಲೇ ಮೆಡಿಕಲ್ ಕಾಲೇಜು ಪೊಲೀಸರು ಠಾಣೆಗೆ ಕೊಂಡೊಯ್ದರು. ದೇಶ ಬಿಟ್ಟು ಪರಾರಿಯಾಗದಿರಲು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಪೊಲೀಸರು ಶಿಂಜಿತಾಳ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಿದ್ದರು. ಇದರ ಬೆನ್ನಲ್ಲೇ ಶಿಂಜಿತ ಕಲ್ಲಿಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ನೀಡಿದ್ದಳು. ಜಾಮೀ ನುರಹಿತ ಕಾಯ್ದೆ ಹೇರಿ ಶಿಂಜಿತಳ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆದುದರಿಂದ ಬಂಧನ ಅನಿವಾರ್ಯ ವೆಂದು ಪೊಲೀಸರು ತಿಳಿಸಿದ್ದರು. ಈ ಮಧ್ಯೆ ವಡಗರದ ಮನೆಯಲ್ಲಿ ಈಕೆ ಇದ್ದಾಳೆಂಬ ಮಾಹಿತಿ ಲಭಿಸಿತ್ತು. ಆತ್ಮಹತ್ಯಾ ಪ್ರೇರಣೆ ಅಪರಾಧ ಹೊರಿಸಿ ಶಿಂಜಿತಾಳನ್ನು ಬಂಧಿಸಲಾಗಿದೆ.
ಪಯ್ಯನ್ನೂರಿನ ಬಸ್‌ನಲ್ಲಿ ಲೈಂಗಿಕ ಆಕ್ರಮಣ ನಡೆದಿದೆ ಎಂದು ಆರೋ ಪಿಸಲಾದ ಬಸ್‌ನ ಕಾರ್ಮಿಕರಿಂದ ಪೊಲೀಸರು ಹೇಳಿಕೆ ದಾಖಲಿಸುವರು. ಬಸ್‌ನಲ್ಲಿದ್ದ ಸಿಸಿ ಟಿವಿ ದೃಶ್ಯಗಳನ್ನು ಇತ್ತೀಚೆಗೆ ಪೊಲೀಸರು ತನಿಖೆ ಗೊಳಪಡಿಸಿದ್ದರು. ಜನವರಿ ೧೮ರಂದು ಗೋವಿಂದಪುರಂ ನಿವಾಸಿ ದೀಪಕ್ ಆತ್ಮಹತ್ಯೆಗೈದಿದ್ದಾರೆ. ಬಸ್‌ನಲ್ಲಿ ಯುವತಿ ವಿರುದ್ಧ ಲೈಂಗಿಕ ಆಕ್ರಮಣ ನಡೆಸಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆಗೈದಿದ್ದರು. ಯುವತಿ ಸಾಮಾಜಿಕ ಜಾಲ ತಾಣಗಳಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಳು.







