ಕೊಚ್ಚಿ: ಫೇಸ್‌ಕ್ರೀಂ ಬದಲಿಸಿಟ್ಟ ತಾಯಿಗೆ ಪುತ್ರಿ ಕಬ್ಬಿಣದ ಸಲಾಖೆಯಿಂದ ಹೊಡೆದು ಪಕ್ಕೆಲುಬು ಮುರಿದ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮಿಯಾದ ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಪನಂಗಾಡ್ ನಿವಾಸಿಯಾದ ನಿವಿಯ ಸೆರೆಯಾದ ಯುವತಿ. ಕಳೆದ ಸೋಮವಾರ ಘಟನೆ ನಡೆದಿದೆ. ನಿವಿಯಳ ಫೇಸ್‌ಕ್ರೀಂ ತಾಯಿ ಬದಲಿಸಿಟ್ಟಿರುವುದೇ ಆಕ್ರಮಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಗ್ಗೆ ತಾಯಿ ಹಾಗೂ ಪುತ್ರಿ ಮಧ್ಯೆ ವಾಗ್ವಾದವುಂಟಾಗಿ ಬಳಿಕ ಜಗಳದಲ್ಲಿ ಕೊನೆಗೊಂಡಿದೆ. ನಿವಿಯ ಈ ಮೊದಲು ಕೂಡಾ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಕ್ರಿಮಿನಲ್ ಹಿನ್ನೆಲೆ ಗಣನೆಗೆ ತೆಗೆದು ನರಹತ್ಯಾಯತ್ನ ಸಹಿತದ ಕಾಯ್ದೆಗಳಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಚಿಂತಿಸುತ್ತಿದ್ದಾರೆ.







