ಎಡರಂಗದ ಅಭಿವೃದ್ಧಿ ಮುನ್ನಡೆ ಯಾತ್ರೆ ಮುಖ್ಯಮಂತ್ರಿ ಫೆ.1ರಂದು ಕುಂಬಳೆಗೆ

ಕಾಸರಗೋಡು: ಎಡರಂಗ ರಾಜ್ಯ ಸಮಿತಿ ನೇತೃತ್ವದಲ್ಲಿ ಉತ್ತರವಲಯ ಅಭಿವೃದ್ಧಿ ಮುನ್ನಡೆ ಜಾಥಾ ಫೆ.1ರಂದು ಸಂಜೆ 3 ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ಜಾಥಾ ನಾಯಕರಾಗಿರುವ ಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು ಎಂದು ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ, ಸಂಸದ ಪಿ. ಸಂತೋಷ್ ಕುಮಾರ್ ಜಾಥಾ ಮೆನೇಜರ್ ಆಗಿರುವರು. ಮೊದಲ ದಿನದ ಪ್ರಚಾರ ನುಳ್ಳಿಪ್ಪಾಡಿಯಲ್ಲಿ ಸಮಾಪ್ತಿಗೊಳ್ಳಲಿದೆ. ಫೆ.೨ರಂದು ಬೆಳಿಗ್ಗೆ 10 ಗಂಟೆಗೆ ಪೆರಿಯಾಟಡ್ಕದಲ್ಲಿ, 3 ಗಂಟೆಗೆ ಕೋಟಚ್ಚೇರಿಯಲ್ಲಿ, 4 ಗಂಟೆಗೆ ಕಾಲಿಕಡವ್‌ನಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಗುವುದು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಸಿ.ಪಿ. ಬಾಬು, ಕೆ.ಆರ್. ಜಯಾನಂದ, ಸಜಿ ಸೆಬಾಸ್ಟಿಯನ್, ವಿ.ವಿ. ಕೃಷ್ಣನ್, ಪಿ.ಟಿ. ನಂದಕುಮಾರ್, ಕರೀಂ ಚಂದೇರ, ರತೀಶ್ ಪುದಿಯಪುರಯಿಲ್, ಸಿ. ಬಾಲನ್, ಅಸೀಸ್ ಕಡಪ್ಪುರಂ, ಪಿ.ಪಿ. ರಾಜು ಭಾಗವಹಿಸಿದ್ದರು.

You cannot copy contents of this page