ಕಾಸರಗೋಡು: ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಲೇ ಸಾಗಿದ ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಇಳಿಕೆ ಉಂಟಾಗಿದೆ. ಇಂದು ಪವನ್ಗೆ 6,640 ರೂ. ಕಡಿಮೆಯಾಗಿ 1,11,120 ರೂ.ಗೆ ತಲುಪಿದೆ. ಅದೇ ರೀತಿ ಗ್ರಾಂಗೆ 830 ರೂ. ಕಡಿಮೆಯಾಗಿ 13,890 ರೂ.ಗೆ ತಲುಪಿದೆ. ಜನವರಿ ೨೯ರಂದು ಕೇರಳದಲ್ಲಿ ಚಿನ್ನಕ್ಕೆ ಸಾರ್ವಕಾಲಿಕ ಬೆಲೆಯೇರಿಕೆಯುಂ ಟಾಗಿತ್ತು. ಅಂದು 1,31,160 ರೂಪಾಯಿಯಂತೆ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ನಡೆದಿದೆ. ಅನಂತರದ ದಿನಗಳಲ್ಲಿ ಚಿನ್ನಕ್ಕೆ ಬೆಲೆ ಇಳಿಮುಖದತ್ತ ಸಾಗಿದೆ.







