ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ, ಬಸ್‌ನಿಂದ ಡೀಸೆಲ್ ಕಳವು

ಕುಂಬಳೆ: ರಿಪೇರಿ ಕೆಲಸಗಳಿಗಾಗಿ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ  ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳನ್ನು  ಹಾಗೂ  ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆಸಲಾಗಿದೆ. ಮೊನ್ನೆ ರಾತ್ರಿ ಕುಂಬಳೆ ಪೆರ್ವಾಡ್‌ನ ಎಸ್‌ಜಿ ಆಟೋ ವರ್ಕ್ ಶಾಪ್‌ನ ಹಿಂಭಾಗದಲ್ಲಿ  ಲಾರಿಗಳನ್ನು ಹಾಗೂ ಬಸ್ ನಿಲ್ಲಿಸಲಾಗಿದೆ. ಈ ಲಾರಿಗಳಿಂದ ಬ್ಯಾಟರಿ ಹಾಗೂ ಬಸ್‌ನಿಂದ ಡೀಸೆಲ್  ಕಳವಿಗೀಡಾಗಿರುವುದು ನಿನ್ನೆ ಅರಿವಿಗೆ ಬಂದಿದೆ.  ಬ್ಯಾಟರಿಕಳವಿನಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಉಂಟಾಗಿದೆಯೆಂದು ದೂರಲಾಗಿದೆ. ವರ್ಕ್ ಶಾಪ್ ಮಾಲಕನ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

You cannot copy contents of this page