ಮುಖ್ಯಮಂತ್ರಿ ಕಾಸರಗೋಡಿನಲ್ಲಿ

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು  ಇಂದು ಕಾಸರಗೋಡಿನಲ್ಲಿ ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಬಳಿಕ ಇದೇ ಪ್ರಥಮ ಬಾರಿಗೆ ಕಾಸರಗೋಡಿಗೆ ಆಗಮಿಸಿದ ವಿ.ಡಿ. ಸತೀಶನ್ ಅವರಿಗೆ ಕಾಂಗ್ರೆಸ್ ಹಾಗೂ ಯುಡಿಎಫ್ ವತಿಯಿಂದ ಅದ್ದೂರಿಯ ಸ್ವಾಗತ ನೀಡಲಾಯಿತು.  ಮುಖ್ಯಮಂತ್ರಿ ಯವರನ್ನು ಕಾಂಗ್ರೆಸ್ ನೇತಾರರು ಹಾಗೂ ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ವಿದ್ಯಾನಗರದಲ್ಲಿರುವ ಡಿಸಿಸಿ ಕಚೇರಿಗೆ ಕರೆದೊಯ್ದರು. ಅಲ್ಲಿ ಅವರಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು. ಬಳಿಕ  ಡಿಸಿಸಿ ಕಚೇರಿಯಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಮಾತನಾಡಿದರು. ಅನಂತರ  ಚೆಟ್ಟುಂಗುಳಿ ರೋಯಲ್ ಕನ್ವೆನ್ಶನ್ ಹಾಲ್‌ನಲ್ಲಿ  ವಿ.ಡಿ. ಸತೀಶನ್‌ರನ್ನು ಯುಡಿಎಫ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ   ಸ್ವಾಗತಿಸಲಾಯಿತು.  ಇಂದು ಬೆಳಿಗ್ಗೆ  ಮುಖ್ಯಮಂತ್ರಿ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ಹಾಗೂ ಎಡನೀರು ಮಠಕ್ಕೆ ಭೇಟಿ ನೀಡಿದರು. ಈ ಎರಡು ಕಡೆಗಳಲ್ಲೂ  ಮುಖ್ಯಮಂತ್ರಿ ಯವರನ್ನು ಹಾರ್ದಿಕವಾಗಿ ಸ್ವಾಗತಿಸಿ,   ಅಭಿನಂದಿಸಿ ಗೌರವಿಸಲಾಯಿತು.

You cannot copy contents of this page