ವಿ.ಡಿ. ಸತೀಶನ್ ನೇತೃತ್ವದ ನವಯುಗ ಯಾತ್ರೆಗೆ ಕುಂಬಳಯಿಂದ ನಾಳೆ ಚಾಲನೆ

ಕಾಸರಗೋಡು: ಕೇರಳವನ್ನು ಮರುಗಳಿಸಿ ಎಂಬ ಸಂದೇಶದೊಂದಿಗೆ ಯುಡಿಎಫ್ ನೇತೃತ್ವದಲ್ಲಿ ವಿರೋಧಪಕ್ಷ ನಾಯಕ ವಿ.ಡಿ.ಸತೀಶನ್ ನಾಯಕತ್ವದಲ್ಲಿ ನಡೆಯುವ ನವಯುಗ ಯಾತ್ರೆಗೆ  ನಾಳೆ ಸಂಜೆ 4 ಗಂಟೆಗೆ ಕುಂಬಳೆ ಪೇಟೆಯಿಂದ ಚಾಲನೆ ದೊರಕಲಿದೆ.

ಈ ಯಾತ್ರೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣುಗೋಪಾಲ್ ಉದ್ಘಾಟಿಸುವರು. ಯುಡಿಎಫ್‌ನ ಎಲ್ಲಾ ಘಟಕ ಪಕ್ಷಗಳ ನೇತಾರರು ಇದರಲ್ಲಿ ಭಾಗವಹಿಸುವರೆಂದು ಈ ಪ್ರಯುಕ್ತ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಸಂಚಾಲಕ ಗೋವಿಂದನ್ ನಾಯರ್ ಮೊದಲಾದವರು ತಿಳಿಸಿದ್ದಾರೆ.

ಯಾತ್ರೆಗೆ ಅಂದು ರಾತ್ರಿ  7 ಗಂಟೆಗೆ ಕಾಸರಗೋಡಿನಲ್ಲಿ ಭವ್ಯ ಸ್ವಾಗತ ನೀಡಲಾಗುವುದು. ಫೆ.7ರಂದು ಬೆಳಿಗ್ಗೆ ೧೦ಕ್ಕೆ ಉದುಮ, 11 ಗಂಟೆಗೆ ಹೊಸದುರ್ಗ, 12 ಗಂಟೆಗೆ ತೃಕರಿಪುರದಲ್ಲಿ ಸ್ವಾಗತ ನೀಡಲಾಗುವುದು. ನಂತರ ಯಾತ್ರೆ ಕಣ್ಣೂರು ಜಿಲ್ಲೆಗೆ ಪ್ರವೇಶಿಸಲಿದೆ. ಯಾತ್ರೆಯಂಗವಾಗಿ  ದೈನಂದಿನ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪಾಲ್ಗೊಳ್ಳಿಸಿ ಸಂವಾದ ಕಾರ್ಯಕ್ರಮಗಳು ನಡೆಯಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಗೆದ್ದು ಅದಿಕಾರಕ್ಕೇ ರುವಂತೆ ಮಾಡುವ ಒಂದು ಜನ ಮುನ್ನಡೆ ಯಾತ್ರೆಯಾಗಲಿದೆ ಈ ನವಯುಗ ಯಾತ್ರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ನೇತಾರರು ತಿಳಿಸಿದ್ದಾರೆ

You cannot copy contents of this page