ಶೋಭಿಕ ವೆಡ್ಡಿಂಗ್ ಮಾಲ್‌ನ ಕಾಸರಗೋಡು ಶೋರೂಂ ಉದ್ಘಾಟನೆ ನಾಳೆ

ಕಾಸರಗೋಡು: ಖ್ಯಾತ ಜವುಳಿ ವ್ಯಾಪಾರ ಸಂಸ್ಥೆಯಾದ ಶೋಭಿಕ ವೆಡ್ಡಿಂಗ್ ಮಾಲ್‌ನ  ಕಾಸರಗೋಡು ಶೋ ರೂಂನ  ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ 10.30ಕ್ಕೆ  ಸಯ್ಯಿದ್ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ನೆರವೇರಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಭಾಗೀರಥಿ ಮುರುಳ್ಯ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಕಾಸರಗೋಡು  ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಕೆ.ಎಂ. ಹನೀಫಾ, ವಾರ್ಡ್ ಕೌನ್ಸಿಲರ್ ರಾಜೇಶ್ ಅಮೈ, ಕೇರಳವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಹಾಗೂ ಇತರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು  ಈ ಪ್ರಯುಕ್ತ  ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಶೋಬಿಕಾ ನಿರ್ದೇಶಕರುಗಳಾದ ಶಿಹಾಬ್ ಕಲ್ಲಿಲ್, ಇರ್ಷಾದ್ ಫಜರ್, ಸಂಶು ಕಲ್ಲಿಲ್,ಹಾಶೀರ್ ಫಜರ್,  ಜನರಲ್ ಮೆನೇಜರ್ ರಿಶಾದ್  ಎ ಮತ್ತು ಶೋರೂಂ ಮೆನೇಜರ್ ಅಮ್ಜದ್ ಅಲಿ ತಿಳಿಸಿದ್ದಾರೆ.

ಕಾಸರಗೋಡು ನಗರದ ಎಂ.ಜಿ. ರಸ್ತೆಯಲ್ಲಿ ಈ ಶೋರೂಂ ನೆಲೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೈವ್ ಡ್ರಾ ಮೂಲಕ ಆಕರ್ಷಕವಾದ ಬಹುಮಾನಗಳನ್ನು ನೀಡಲಾಗುವುದು.   25,೦೦೦ ರೂ.ನಂತೆ  ನಾಲ್ಕು ಮಂದಿಗೆ ತಲಾ  ಪ್ರಥಮ ಬಹುಮಾನವಾಗಿಯೂ, ದ್ವಿತೀಯ ಬಹುಮಾನವಾಗಿ ಇಬ್ಬರಿಗೆ ಡೈಮಂಡ್ ನೆಕ್ಲೇಸ್ ನೀಡಲಾಗುವುದು. ಕಾರ್ಯಕ್ರಮದಂಗವಾಗಿ ನಾಳೆ ಸಂಜೆ 6 ಗಂಟೆಗೆ ಅಕ್ಭರ್ ಖಾನ್ ಮತ್ತು ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಜವುಳಿಗಳು ನಮ್ಮ ಸಂಸ್ಥೆಯಲ್ಲಿ ಮಿತದರದಲ್ಲಿ ಲಭಿಸಲಿದೆಯೆಂದು ಸಂಸ್ಥೆಯವರು ತಿಳಿಸಿದ್ದಾರೆ.

You cannot copy contents of this page