ಕಾಸರಗೋಡು: ನಗರದಲ್ಲಿ ನಿನ್ನೆ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಹಿತ ಓರ್ವನನ್ನು ಸೆರೆಹಿಡಿಯಲಾಗಿದೆ.
ನೆಲ್ಲಿಕುಂಜೆ ಬಂಗರಕುನ್ನು ಸಿಂಗಪೂರ್ ಹೌಸ್‌ನ ಬಿ.ಎಂ. ಸಿದ್ದಿಕ್ (43) ಎಂಬಾತನನ್ನು ಬಂಧಿಸಿ ೩೨ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಗರಠಾಣೆ ಎಸ್‌ಐ ಸಿ ಆರ್. ಮೌಶಮಿ ಹಾಗೂ ತಂಡ ನಿನ್ನೆ ರಾತ್ರಿ 10.30ರ ವೇಳೆ ಕರಂದಕ್ಕಾಡಿನಿಂದ ಈತನನ್ನು ಬಂಧಿಸಿರುವುದಾಗಿ ತಿಳಿಸಲಾಗಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸ್ ತಂಡ ಕರಂದಕ್ಕಾಡ್‌ನ ಹೋಟೆಲೊಂ ದರ ಬಳಿಗೆ ತಲುಪಿದಾಗ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂ ದಿದೆ. ಇದರಿಂದ ಪೊಲೀಸರು ಕಾರಿನ ಸಮೀಪಕ್ಕೆ ತೆರಳುತ್ತಿದ್ದಂತೆ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದನು. ಕೂಡಲೇ ಆತನನ್ನು ತಡೆದು ನಿಲ್ಲಿಸಿ ಕಾರಿನ ಡ್ಯಾಶ್ ಬೋರ್ಡ್ ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡದಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಶರತ್, ಚಾಲಕ ಜಿತೇಶ್ ಎಂಬಿವರಿದ್ದರು.




