ನ್ಯಾಯಮೂರ್ತಿ ಆರ್.ಎನ್. ಪ್ರಸಾದ್ ಆಯೋಗದ ವರದಿಯನ್ನು ಜ್ಯಾರಿಗೆ ತರಬೇಕು-ಒಬಿಸಿ ಮೋರ್ಛಾ

ಕಾಸರಗೋಡು: ಸಾಂಪ್ರದಾ  ಯಿಕ ಕೆಲಸಗಳನ್ನು ನಿರ್ವಹಿಸುವ ಸಮುದಾಯಗಳನ್ನು ಕ್ರಿಮಿಲೇಯ ರ್‌ನಿಂದ ಹೊರಗಿಡಬೇಕೆಂಬ ನ್ಯಾಯಮೂರ್ತಿ ಆರ್.ಎನ್. ಪ್ರಸಾದ್ ಆಯೋಗದ ವರದಿಯನ್ನು ಜ್ಯಾರಿಗೆ ತರಲು  ಸರಕಾರ ಸಿದ್ಧವಾಗ ಬೇಕೆಂದು ಒಬಿಸಿ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಶೈಬು ಒತ್ತಾಯಿಸಿದ್ದಾರೆ. ಒಬಿಸಿ ಮೋರ್ಛಾ ಕಾಸರಗೋಡು ಜಿಲ್ಲಾ ಸಮಿತಿ  ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿಯ ಮುಂದೆ ಆಯೋಜಿಸಲಾದ ಧರಣಿಯಲ್ಲಿ ಮುಖ್ಯ ಭಾಷಣ ಮಾಡಿ ಈ ಬೇಡಿಕೆ ಮುಂದಿರಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್  ಧರಣಿ ಉದ್ಘಾಟಿಸಿದರು. ಒಬಿಸಿ  ಮೋರ್ಛಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ಪರವನಡ್ಕ, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಒಬಿಸಿ ಮೋರ್ಛಾ ಜಿಲ್ಲಾ ಕಾರ್ಯದರ್ಶಿ ಮುರಳೀ ಕುಮಾರ್ ಮಧೂರು, ಕುಂಞ್ಞಿಕಣ್ಣನ್, ಗುರುಪ್ರಸಾದ್ ಕಾಸರಗೋಡು, ಸುನಿಲ್ ಅನಂತಪುರ, ಮಹೇಶ್ ಪುಣಿಯೂರು ಮಾತನಾಡಿದರು. ಒಬಿಸಿ ಮೋರ್ಛಾ ರಾಜ್ಯ ಕಾರ್ಯದರ್ಶಿ ವಿಜಯನ್ ವಟ್ಟಿಪ್ಪರಂ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಾನಂದ ಕುಂಬಳೆ ಸ್ವಾಗತಿಸಿ, ಕಾಸರಗೋಡು ಮಂಡಲ ಅಧ್ಯಕ್ಷ ಅಶೋಕ್ ಚೆಟ್ಟಿಯಾರ್ ವಂದಿಸಿದರು.

RELATED NEWS

You cannot copy contents of this page