ಬಾಲಕಿಯನ್ನು ಹಿಂಬಾಲಿಸಿ ತೊಂದರೆ ನೀಡಿದ ಯುವಕ ಸೆರೆ
ಕಾಸರಗೋಡು: ಪ್ಲಸ್‌ಟು ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೊಂದರೆ ನೀಡಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಮಾನ್ಯ ಕೊಲ್ಲಂಗಾನದ ಅಜ್ಮಲ್ (೨೫) ಎಂಬಾತನನ್ನು ವಿದ್ಯಾನಗರ ಪೊಲೀಸರು ಬಂಧಿಸಿ ದ್ದಾರೆ. ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.
ಬಾಲಕಿ ಪ್ರಯಾಣಿಸುವ ಬಸ್‌ನಲ್ಲೂ, ಬಸ್ ಇಳಿದು ನಡೆದು ಹೋಗುವಾಗಲೂ ಆಕೆಯನ್ನು ಹಿಂ ಬಾಲಿಸಿ ಈತ ತೊಂದರೆ ನೀಡುತ್ತಿದ್ದ ನೆಂದು ದೂರಲಾಗಿದೆ. ಇದನ್ನು ಬಾಲಕಿ ಪ್ರಶ್ನಿಸಿದ್ದರೂ ಆತ ತನ್ನ ಕೃತ್ಯ ಮುಂದುವರಿಸಿದನೆಂದು ಹೇಳಲಾ ಗಿದೆ. ಇದರಿಂದ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಪೊಲೀಸರು ಕೇಸು ದಾಖಲಿಸಿ ಯುವಕನನ್ನು ಬಂಧಿಸಿದ್ದಾರೆ.