ಕಲ್ಲಿಕೋಟೆ: ಶೌಚಾಲಯಕ್ಕೆ ಹೋಗಿ ಬರುತ್ತೇ ನೆಂದು ತಿಳಿಸಿ 8 ತಿಂಗಳ ಪ್ರಾಯದ ಮಗುವನ್ನು ಸಹ ಪ್ರಯಾಣಿಕನ ಕೈಯಲ್ಲಿ ನೀಡಿ ಯುವತಿ ಪರಾರಿಯಾಗಿದ್ದು, ಬಳಿಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯನ್ನು ಪತ್ತೆಹಚ್ಚಲಾಗಿದೆ. ಕಲ್ಲಿಕೋಟೆಯಿಂದ ಶೋರ್ನೂರಿಗೆ ಬೆಳಿಗ್ಗೆ 10.15 ಕ್ಕೆ ಹೊರಡುವ ರೈಲಿನಲ್ಲಿ ಈ ಘಟನೆ ನಡೆದಿದೆ. ಮಗುವಿನೊಂದಿಗೆ ರೈಲಿನಲ್ಲಿ ಕುಳಿತಿದ್ದ ಯುವತಿ ರೈಲು ಪ್ರಯಾಣ ಆರಂಭಿಸಲು ಕೆಲವೇ ನಿಮಿಷಗಳಿರುವಾಗ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದೂ ಅದುವರೆಗೆ ಮಗುವನ್ನು ಹಿಡಿದುಕೊಳ್ಳುವಂತೆ ರೈಲಿನಲ್ಲಿದ್ದ ಪ್ರಯಾಣಿಕನಲ್ಲಿ ಯುವತಿ ತಿಳಿಸಿದ್ದಾಳೆ. ಇದರಂತೆ ಸಹಪ್ರಯಾ ಣಿಕ ಮಗುವನ್ನು ಪಡೆದುಕೊಂಡಿದ್ದನು. ಇದೇ ವೇಳೆ ರೈಲು ಪ್ರಯಾಣ ಹೊರಟರೂ ಮಗುವಿನ ತಾಯಿ ಮರಳಿ ಬಾರದಿರುವುದರಿಂದ ಆತಂಕಕ್ಕೊಳಗಾದ ಪ್ರಯಾಣಿಕ ರೈಲು ಫರೋಕ್ ನಿಲ್ದಾಣಕ್ಕೆ ತಲುಪಿದಾಗ ಮಗುವಿನೊಂದಿಗೆ ಇಳಿದಿದ್ದಾನೆ. ಬಳಿಕ ಸ್ಟೇಶನ್ ಮಾಸ್ತರ್‌ರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾನೆ. ಅಲ್ಲದೆ ಮಗುವನ್ನು ಸ್ಟೇಶನ್ ಮಾಸ್ತರ್‌ಗೆ ಹಸ್ತಾಂತರಿಸಲಾಯಿತು. ಸ್ಟೇಶನ್ ಮಾಸ್ತರ್ ರೈಲ್ವೇ ಪೊಲೀಸ್ ಹಾಗೂ ಚೈಲ್ಡ್ ಲೈನ್‌ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ಕಲ್ಲಿಕೋಟೆ ರೈಲ್ವೇ ಪೊಲೀಸ್ ಸಹಿತ ಇತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮಗುವನ್ನು ಚೈಲ್ಡ್ ಲೈನ್ ಪಡೆದುಕೊಂಡು ಸೆಂಟ್ ವಿನ್ಸೆಂಟ್ ಹೋಂಗೆ ತಲುಪಿಸಲಾ ಯಿತು. ಈಮಧ್ಯೆ ಕಲ್ಲಿಕೋಟೆ ರೈಲ್ವೇ ನಿಲ್ದಾಣ ಪರಿಸರದಿಂದ ಯುವತಿ ಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಯುವತಿಗೆ ಮಾನಸಿಕ ಅಸ್ವಸ್ಥತೆಗಳಿ ವೆಯೇ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮಗು ಎಲ್ಲಿದೆ ಎಂದು ಯುವತಿಯಲ್ಲಿ ವಿಚಾರಿಸಿ ದಾಗ ಬೇರೊಬ್ಬ ವ್ಯಕ್ತಿಗೆ ನೀಡಲಾಗಿದೆಯೆಂದು ಯುವತಿ ತಿಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇದಕ್ಕೂ ಮೊದಲು ಯುವತಿ ಮಗುವನ್ನು ಉಪೇಕ್ಷಿಸಲು ಪ್ರಯತ್ನಿಸಿರುವುದಾಗಿ ತನಿಖೆಯಲ್ಲಿ ಸೂಚನೆ ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿಶು ಕ್ಷೇಮ ಸಮಿತಿಯ ವರದಿ ಲಭಿಸಿದ ಬಳಿಕವೇ ಮಗುವನ್ನು ಯುವತಿಗೆ ಹಸ್ತಾಂತರಿ ಸುವ ಕುರಿತು ತೀರ್ಮಾನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







