ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಉತ್ಸವ: ಕರಂದಕ್ಕಾಡ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ  ವಾರ್ಷಿಕ ಉತ್ಸವದಂಗವಾಗಿ ಕರಂದಕ್ಕಾಡ್ ಬೆಡಿಕಟ್ಟೆ ಸೇವಾ ಸಮಿತಿ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಕರಂದಕ್ಕಾಡ್ ಅಧ್ಯಕ್ಷತೆ ವಹಿಸಿದರು. ಈ ವೇಳೆ ಸಾಧಕರಾದ ಜಗಜೀವನ್ ರಾವ್, ರಾಜಶೇಖರ್, ಅಭಿಜ್ಞಾ ಹರೀಶ್, ಗಿರಿಧರ್ ಸಾಲ್ಯಾನ್, ರಾಮನ್, ಹರೀಶ್ ಕೆ.ಆರ್ ರನ್ನು ಗೌರವಿಸಲಾ ಯಿತು. ಕೋಶಾಧಿಕಾರಿ ಗಣೇಶ್ ಎ, ಕೇಶವ, ವೀರ ಹನುಮಾನ್ ಮಂದಿರದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ರಾಧಾಕೃಷ್ಣ ಸೂರ್ಲು ನಿರೂಪಿಸಿ, ಹರೀಶ್ ಕೆ.ಆರ್ ಸ್ವಾಗತಿಸಿದರು. ಹರೀಶ್ ಕರಂದಕ್ಕಾಡ್ ವಂದಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ ಜರಗಿತು.

You cannot copy contents of this page