ಉಪ್ಪಳ: ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದು ಹಲವು ವರ್ಷ ಕಳೆದರೂ ಮರು ನಿರ್ಮಿಸದಿರುವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಸಂಚಾರ ಭೀತಿಗೆ ಕಾರಣವಾಗುತ್ತಿದೆ. ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮಿಸುವ ದೇರಂಬಳದಲ್ಲಿ ೨೦೦೩ರಲ್ಲಿ ಜಿಲ್ಲಾ ಪಂಚಾಯತ್‌ನಿAದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಹಲವು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಕುಸಿದು ಬಿದ್ದಿದೆ. ಈ ವೇಳೆ ಜನರ ಸಂಚಾರ ಇಲ್ಲದಿರುವುದರಿಂದ ಭಾರೀ ದುರಂತ ತಪ್ಪಿಹೋಗಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿದ್ದರೂ ಹಲವು ವರ್ಷ ಕಳೆದರೂ ಸೇತುವೆ ಮರು ನಿರ್ಮಾಣಕ್ಕೆ ಕ್ರಮಯಿಲ್ಲದಿರುವುದು ಊರವರನ್ನು ಸಮಸ್ಯೆಗೆ ಸಿಲುಕಿಸಿದೆ. ಊರವರು ತಾತ್ಕಾಲಿಕವಾಗಿ ಕಂಗಿನಿAದ ನಿರ್ಮಿ ಸಿದ ಸೇತುವೆಯ ಮೂಲಕ ಸಂಚರಿಸು ತ್ತಿರುವುದು ಅಪಾಯಕಾರಿಯಾಗಿದೆ. ಸೋಮವಾರ ಸಂಜೆ ದೇರಂಬಳ ನಿವಾಸಿ ಸುಸ್ಮಿತಾ ಎಂಬಾಕೆ ಹೊಳೆಗೆ ಬಿದ್ದು ಸ್ಥಳೀಯ ನಿವಾಸಿ ಉದಯ ಕುಮಾರ್ ಶೆಟ್ಟಿ ರಕ್ಷಿಸಿದ ಘಟನೆ ನಡೆದಿದೆ. ಮೀಂಜ ಪಂಚಾಯತ್‌ನ ದೇರಂಬಳ ನಿವಾಸಿಗಳಿಗೆ ಜೋಡು ಕಲ್ಲು ಹಾಗೂ ಬೇಕೂರು ಸರಕಾರಿ ಶಾಲೆಗೆ ಹತ್ತಿರ ದಾರಿಯಾಗಿದ್ದು, ಶಾಲಾ ಮಕ್ಕಳ ಸಹಿತ ಕೆಲಸಗಳಿಗೆ, ಅಂಗಡಿಗಳಿಗೆ ತೆರಳುತ್ತಿದ್ದಾರೆ. ಹಾಗೆಯೇ ಜೋಡುಕಲ್ಲು, ಮಡಂದೂರು ಸಹಿತ ಪರಿಸರ ನಿವಾಸಿಗಳಿಗೆ ಚಿಗುರುಪಾದೆ, ಮೀಯಪದವು ಪ್ರದೇಶಕ್ಕೂ ಹತ್ತಿರವಾಗಿದೆ. ಹೆಚ್ಚಿನ ಜನರು ಈ ಕಾಲು ಸೇತುವೆ ಯನ್ನೇ ಆಶ್ರಯಿಸುತ್ತಿದ್ದಾರೆ. ಕುಸಿದು ಬಿದ್ದ ಸೇತುವೆಯನ್ನು ಮರು ನಿರ್ಮಿ ಸಲು ಮಂಗಲ್ಪಾಡಿ ಪಂಚಾಯತ್‌ನ ಮಾಜಿ ಸದಸ್ಯೆ ಸುಜಾತ ಶೆಟ್ಟಿ ನೀಡಿದ ಮನವಿಯಂತೆ ಸ್ಥಳಕ್ಕೆ ಇರಿಗೇಶನ್ ಇಲಾಖೆ ಅಧಿಕಾರಿಗಳು ತಲುಪಿ ಪರಿ ಶೀಲನೆ ನಡೆಸಿರುವುದಾಗಿ ಸದಸ್ಯೆ ತಿಳಿಸಿ ದ್ದಾರೆ. ಅಲ್ಲದೆ ಊರವರು ಕೂಡಾ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಯನ್ನು ನೀಡಿದ್ದರು. ಈ ಪ್ರದೇಶಕ್ಕೆ ಶಾಸ ಕರು, ಸಂಸದರು, ರಾಜಕೀಯ ನೇತಾರರು ಭೇಟಿ ನೀಡಿದರೂ ಸೇತುವೆಯ ಮರು ನಿರ್ಮಾಣಕ್ಕೆ ಯವುದೇ ಕ್ರಮ ಉಂಟಾಗ ಲಿಲ್ಲವೆಂದು ಊರವರು ತಿಳಿಸಿದ್ದಾರೆ.





