ಕಚೇರಿ ಮುಂದೆ ನಿಲುಗಡೆಗೊಳಿಸಲಾದ ಲಾರಿ ಕಳವು

ಕುಂಬಳೆ: ಕಚೇರಿಯ ಮುಂದೆ ನಿಲುಗಡೆಗೊಳಿಸಲಾಗಿದ್ದ ಲಾರಿ ಕಳವಿಗೀಡಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಲ್ಪಾಡಿ ಅಡ್ಕ ಶಮೀಮಾ ಮಂಜಿಲ್‌ನ ಝಕರಿಯಾ ಎಂ. ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಾರ್ಚ್ 21ರಂದು ರಾತ್ರಿ 11.30 ಮತ್ತು 22ರಂದು ಬೆಳಿಗ್ಗೆ 8.30ರ ಮಧ್ಯೆ ಈ ಲಾರಿಯನ್ನು ಕಳವುಗೈಯ್ಯಲಾಗಿದೆ. 15 ಲಕ್ಷ ರೂ. ಮೌಲ್ಯದ ಈ ಲಾರಿಯನ್ನು ನಾನು ಅಡ್ಕದ ಝಡ್.ಎಂ.ಎಸ್ ಫಿಶ್ ಸರ್ವೀಸ್ ಕಚೇರಿಯ ಎದುರುಗಡೆ ನಿಲುಗಡೆಗೊಳಿಸಿದ್ದೆ. ಅಲ್ಲಿಂದ ಅದನ್ನು ಕಳವುಗೈಯ್ಯಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಝಕರಿಯಾ ತಿಳಿಸಿದ್ದಾರೆ.

RELATED NEWS

You cannot copy contents of this page