ಎಕೆಎಂ ಅಶ್ರಫ್‌ರ ಮಂಡಲ ಪರ್ಯಟನೆ ಮುಂದುವರಿಕೆ

ಮಂಜೇಶ್ವರ:  ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರದ ಮಂಡಲ ಪರ್ಯಟನೆ ನಿನ್ನೆ ಮೀಂಜ, ಪೈವಳಿಕೆ ಪಂಚಾಯತ್‌ನಲ್ಲಿ ಮುಂದುವರಿಯಿತು. ಹಲವೆಡೆ ಕಾರ್ನರ್ ಮೀಟಿಂಗ್ ಜರಗಿತು. ದೈಗೋಳಿಯಿಂದ ಆರಂಭಗೊಂಡ ಪರ್ಯಟನೆ ಮಜೀರ್ಪಳ್ಳ, ಗಾಂಧಿನಗರ, ಮದಂಗಲ್ಲು, ಮೀಯಪದವು ಮೂಲಕ  ಮೂಡಂಬೈಲು ಕಡಂಬಾರುಗಳಲ್ಲಿ ಸಾಗಿತು. ಅಪರಾಹ್ನ ಲಾಲ್‌ಬಾಗ್ ನಿಂದ ಕುರುಡಪದವು ಮುಳಿಗದ್ದೆಯಾಗಿ ಜೋಡುಕಲ್ಲು ಮೂಲಕ ಬಾಯಿಕಟ್ಟೆಯಲ್ಲಿ ಕೊನೆಗೊಂಡಿತು. ಯುಡಿಎಫ್ ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ ಮೂಸ, ಎಂ. ಅಬ್ಬಾಸ್, ಎ.ಕೆ. ಆರೀಫ್, ಲಕ್ಷ್ಮಣ ಪ್ರಭು, ಹರ್ಷಾದ್ ವರ್ಕಾಡಿ, ಅಸೀಸ್ ಕಳತ್ತೂರು, ಯು.ಕೆ.ಸೈಫುಲ್ಲಾ ತಂಙಳ್, ಹಾದಿ ತಂಙಳ್,ಡಿಎಂಕೆ ಮೊಹಮ್ಮದ್, ಸೋಮಪ್ಪ, ದಾಮೋದರ ಸಹಿತ ಹಲವರು ಭಾಗವಹಿಸಿದರು. ಇಂದು ಮಂಜೇಶ್ವರ, ವರ್ಕಾಡಿ ಪಂಚಾಯತ್‌ನಲ್ಲಿ ಎಕೆಎಂ ಅಶ್ರಫ್ ಪರ್ಟನೆ ನಡೆಸುವರು.

RELATED NEWS

You cannot copy contents of this page