ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಂದಿನಿಂದ 18ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ. ಈ ಸಂದರ್ಭ ದಲ್ಲಿ ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ ೫ಕ್ಕೆ ತಾಯಂ ಬಕ, ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ ಬಲಿ ನಡೆಯಲಿದೆ.
ಇಂದು ಬೆಳಿಗ್ಗೆ 6.30ಕ್ಕೆ ವೇದಪಾ ರಾಯಣ, 9ಕ್ಕೆ ಧ್ವಜಾರೋಹಣ, 10ಕ್ಕೆ ಸಹಸ್ರಕುಂಭಾಭಿಷೇಕ ಜರಗಿತು.
ನಾಳೆ ಬೆಳಿಗ್ಗೆ 5 ಗಂಟೆಗೆ ದೀಪೋ ತ್ಸವ, ವಿಷುಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30ಕ್ಕೆ ಪಂಚ ವಾದ್ಯ, 16ರಂದು ಬಳಿಗ್ಗೆ 5ಕ್ಕೆ ದೀಪೋತ್ಸವ, ಉತ್ಸವ ಬಲಿ, ರಾತ್ರಿ 8ರಿಂದ ನಡುದೀಪೋತ್ಸವ, ಉತ್ಸವ ಬಲಿ, ಸೇವೆ ಸುತ್ತುಗಳು ಜರಗಲಿದೆ. 17ರಂದು ಬೆಳಿಗ್ಗೆ 5ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನ ಬಲಿ, 7ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಶೋಭಾಯಾತ್ರೆ, 8.30ಕ್ಕೆ ಕಟ್ಟೆಪೂಜೆ, 10ಕ್ಕೆ ಮಧೂರು ಬೆಡಿ ಕಟ್ಟೆಯಲ್ಲಿ ಕಟ್ಟೆಪೂಜೆ, ಸುಡುಮದ್ದು ಪ್ರದರ್ಶನ, 12.30ಕ್ಕೆ ಶಯನ, ಕವಾಟ ಬಂಧನ ನಡೆಯಲಿದೆ.
18ರಂದು ಬೆಳಿಗ್ಗೆ 7ಕ್ಕೆ ಕವಾ ಟೋದ್ಘಾಟನೆ, ರಾತ್ರಿ 9ಕ್ಕೆ ಉತ್ಸವ ಬಲಿ, 11 ಗಂಟೆಗೆ ಶ್ರೀ ಕ್ಷೇತ್ರದ ಆರಾಟು ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋ ಹಣ ನಡೆಯಲಿದೆ.






