ಐಲ ಕ್ಷೇತ್ರ ವಿಷು ಜಾತ್ರೆ: ಬೆಡಿ ಉತ್ಸವ ನಾಳೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾ ಮಹೋತ್ಸವ ಆರಂಭಗೊAಡು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿದೆ. ಇಂದು ನಡುದೀಪೋತ್ಸವದ ಪ್ರಯುಕ್ತ ರಾತ್ರಿ 7.45ರಿಂದ ಮಹಾ ತಿರುವಾದಿರಕಳಿ, 8ರಿಂದ ಮಾಗಣೆ ಕೂಟ, ಪಲ್ಲಕ್ಕಿ ಉತ್ಸವ ಸಹಿತ ಬಲಿ ಉತ್ಸವ, ನಡು ದೀಪೋತ್ಸವ, ನಾಳೆ ಪೂರ್ವಾಹ್ನ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 7.45ರಿಂದ ಬಲಿ ಉತ್ಸವ, ಕೆರೆದೀಪೋತ್ಸವ, 9.30ರಿಂದ ಐಲ ಕ್ಷೇತ್ರದ ಮೈದಾನದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, 10.30ರಿಂದ ಕಟ್ಟೆ ಪೂಜೆ, ಸಾರ್ವಜನಿಕ ಬೆಡಿ ಉತ್ಸವ, 12.30ಕ್ಕೆ ಕವಾಟ ಬಂಧನ. 18ರಂದು ಆರಾಟೋತ್ಸವ, ಶ್ರೀ ದೇವರ ಅವಭೃತ ಸ್ನಾನ, ದ್ವಜಾವರೋಹಣದೊಂದಿಗೆ ವಿಷು ಜಾತ್ರೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. 19ರಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

You cannot copy contents of this page