ಅಂತಾರಾಷ್ಟ್ರ ಕರಾಟೆ ಸ್ಪರ್ಧೆ: ಕುಂಬಳೆ ಜೆಎಸ್‌ಕೆಎ ಉನ್ನತ ಸಾಧನೆ

ಕಾಸರಗೋಡು: ತೃಶೂರು ಟೆನ್ನಿಸ್ ಕ್ಲಬ್‌ನಲ್ಲಿ ನಡೆದ ೪೮ನೇ ಅಂತಾರಾಷ್ಟ್ರೀಯ ಶೋಟೊ ಕಾನ್ ಕರಾಟೆ ಸ್ಪರ್ಧೆಯಲ್ಲಿ ಕುಂಬಳೆ ಜೆಎಸ್‌ಕೆಎಯ ವಿದ್ಯಾರ್ಥಿಗಳು ೭ ಚಿನ್ನ ಸಹಿತ ೧೭ ಪದಕಗಳ ಸಾಧನೆ ಮಾಡಿದ್ದಾರೆ. ಕಾತ, ಕುಮಿತೆ ವಿಭಾಗಗಳಲ್ಲಿ  9 ಸ್ಪರ್ಧಾಳುಗಳನ್ನು ಸ್ಪರ್ಧೆಗಿಳಿಸಿ ಜೆಎಸ್‌ಕೆಎ ಈ ಸಾಧನೆ ಮಾಡಿದೆ. ಗ್ರೀನ್, ಬ್ರೌನ್ ಬೆಲ್ಟ್ ಮಕ್ಕಳ ಸ್ಪರ್ಧೆಯಲ್ಲಿ ಚರಿತ್ (6), ಮುಹಮ್ಮದ್ ಸಯಾನ್ ಇಸ್ಮಾಯಿಲ್ (12) ಎಂಬಿವರು ಎರಡು ವಿಭಾಗಳಲ್ಲಿ ಚಿನ್ನ ಗಳಿಸಿದ್ದಾರೆ. ಬ್ರೌನ್ ಬೆಲ್ಟ್ ಅಕುಲ್‌ರಾಜ್ (11)ಗೆ ಒಂದು ಚಿನ್ನ, ಒಂದು ಬೆಳ್ಳಿ ಪದಕ ಲಭಿಸಿದೆ. ಬ್ಲಾಕ್‌ಬೆಲ್ಟ್ ಪಟು ಶೋಭಿತಾ ಆಳ್ವ (16)ಳಿಗೆ ಒಂದು ಚಿನ್ನ, ಒಂದು ಕಂಚು ಲಭಿಸಿದೆ. ಗ್ರೀನ್ ಬೆಲ್ಟ್‌ನಲ್ಲಿ ಆರ್ಯನ್ ಕೆ ವಿಜಯ್ (7)ಗೆ ಒಂದು ಬೆಳ್ಳಿ, ಒಂದು ಕಂಚಿನ ಪದಕ ಲಭಿಸಿದೆ. ಪರ್ಪಲ್ ಬೆಲ್ಟ್ ವಿಭಾಗದಲ್ಲಿ ಕೆ. ಅನುಶ್ವೇತಾ (11) ಎರಡು ಕಂಚಿನ ಪದಕ, ಬ್ರೌನ್ ಬೆಲ್ಟ್ ಮಕ್ಕಳ ಸ್ಪರ್ಧೆಲ್ಲಿ ಸಾಕ್ಷಿ ಶೆಟ್ಟಿ (13) ಒಂದು ಚಿನ್ನದ ಪದಕ, ಒಂದು ಕಂಚಿನ ಪದಕ, ಆವಣಿ ಪೈ (9), ಭೂಮಿಕ (13) ಎಂಬಿವರು ಒಂದೊಂದು ಬೆಳ್ಳಿ ಪದಕ ಗಳಿಸಿದ್ದಾರೆ. ಭಾರತ, ಶ್ರೀಲಂಕಾ, ಏಷ್ಯಾದ ಇತರ ದೇಶಗಳಿಂದಾಗಿ ಸಾವಿರಾರು ಸ್ಪರ್ಧಾಳು ಗಳು ಭಾಗವಹಿಸಿದ್ದರು. ಸದಾನಂದನ್, ಅಕ್ಷಯ್ ಕುಮಾರ್ ಮಕ್ಕಳಿಗೆ ತರಬೇತು ನೀಡಿದ್ದಾರೆ. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಎಸ್‌ಕೆಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಸಿ ಪೈ, ಕಾರ್ಯದರ್ಶಿ ಅಬ್ದುಲ್ ರಜಾಕ್ ಪೆರುವಾಯಿ, ಎಕ್ಸಿಕ್ಯೂಟಿವ್ ಸದಸ್ಯ ವಿನುರಾಜ್ ಆರ್.ಪಿ, ಅಧ್ಯಾಪಕರು ಭಾಗವಹಿಸಿದರು.

RELATED NEWS

You cannot copy contents of this page