ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ: ಸಾಧ್ಯವಾದರೆ ಕುಂಬಳೆ ಸರಕಾರಿ ಆಸ್ಪತ್ರೆಯ ಅವಸ್ಥೆ ತಿಳಿಯಬೇಕು

ಕುಂಬಳೆ: ಕುಂಬಳೆಯ ಕರಾವಳಿ ವಲಯದಲ್ಲಿ ಕಾರ್ಯಾಚರಿಸುವ ಸರಕಾರದ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಕಳೆದ ಮೂರು ದಶಕಗಳಿಂದ ಅವಗಣನೆಯನ್ನು ಎದುರಿಸುತ್ತಿದೆ. ದಿನಂಪ್ರತಿ ಈ ಆಸ್ಪತ್ರೆಗೆ 3೦೦ಕ್ಕೂ ಹೆಚ್ಚು ಮಂದಿ ರೋಗಿಗಳು ತಲುಪುತ್ತಿದ್ದಾರೆ. ಆಸ್ಪತ್ರೆ ಕಟ್ಟಡ ಸ್ಥಳ ಪರಿಮಿತಿಯಿಂದಾಗಿ ಉಸಿರುಗಟ್ಟಿದಂತಾಗುತ್ತಿದೆ. ಕಾಸರಗೋಡು ಬ್ಲೋಕ್ ಪಂಚಾಯತ್ ಈ ಆರೋಗ್ಯ ಕೇಂದ್ರದ ಆಡಳಿತ ನಿರ್ವಹಣೆ ನಡೆಸುತ್ತಿದೆ. ಹಲವಾರು ಯೋಜನೆಗಳು ಕೇಂದ್ರ- ರಾಜ್ಯ ಸರಕಾರಗಳಿಗೆ ಸಲ್ಲಿಸಿ ಅಭಿವೃದ್ಧಿ ಉಂಟಾಗಬಹುದು ಎಂಬ ನಿರೀಕ್ಷೆಯಲ್ಲಿ ಬ್ಲೋಕ್ ಪಂಚಾಯತ್ ಕಾಯುತ್ತಿದೆ. ಈ ಮೊದಲು 14 ಕೋಟಿ ರೂ.ಗಳ ಯೋಜನೆ ಸಲ್ಲಿಸಿದಾಗ ರಾಜ್ಯ ಸರಕಾರದ ಪಾಲಾದ ೪೦ ಶೇಕಡಾವನ್ನು ರಾಜ್ಯ ಸರಕಾರ ವಹಿಸಬೇಕೆಂದು ವಿನಂತಿಸಲಾಗಿತ್ತು. ಹಿಂದಿನ ಸರಕಾರ ಅದನ್ನು ಕೇಳಿಯೂ ಕೇಳದಂತೆ ಮೌನ ವಹಿಸಿದೆ.

ಬಳಿಕ 5.40 ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಿರುವು ದಾಗಿ ಹೇಳಲಾಗುತ್ತಿದೆ. ಈಗ ಈ ವಿಷಯವನ್ನು ಪ್ರತಿಯೊಬ್ಬರೂ ಹೇಳುತ್ತಾ ಸಾಗುತ್ತಿದ್ದಾರೆ. ಯೋಜನೆ ಗಳಿಗೆ ಕೋಟ್ಯಂತರ ರೂ. ಮಂಜೂರು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸುವುದಲ್ಲದೆ ಯಾವುದೇ ಮುಂದಿನ ಕ್ರಮ ಉಂಟಾಗುತ್ತಿಲ್ಲ. ರೋಗ ತಗಲುವುದರಲ್ಲಿ ಜಾಗ್ರತೆ ವಹಿಸಬೇಕೆಂದು ಮಾತ್ರವೇ ಡಿಎಂಒ ಆಗ್ರಹಿಸುತ್ತಿರುವುದು. ಚಿಕಿತ್ಸೆಗೆ ವ್ಯವಸ್ಥೆ ಏರ್ಪಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗು ತ್ತಿಲ್ಲ. ಅವಗಣನೆ ವಿರುದ್ಧ ಹಲವಾರು ಹೋರಾಟಗಳನ್ನು ಇಲ್ಲಿ ನಡೆಸಲಾಗಿದೆ.

ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿರುವ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್‌ಗೆ ಕಳೆದ ವರ್ಷ ಬ್ಲೋಕ್ ಫ್ಯಾಮಿಲಿ   ಸೆಂಟರ್ ಎಂಬ ಹೆಸರು ಲಭಿಸಿದೆ. ಬ್ಲೋಕ್ ಪಂಚಾಯತ್ ಕೇಂದ್ರ ಕಾಸರಗೋಡು ಆದ ಕಾರಣ ಆಸ್ಪತ್ರೆಯ ಅಭಿವೃದ್ಧಿಗೆ ಸಂಸದರ, ಇಬ್ಬರು ಶಾಸಕರ ಸಹಾಯ ಲಭಿಸಬಹುದಾಗಿದ್ದರೂ, ಆಸ್ಪತ್ರೆಯ ಶೋಚನೀಯಾವಸ್ಥೆಗೆ ಇದುವರೆಗೆ ಪರಿಹಾರ ಕಾಣಲು ಸಾಧ್ಯವಾಗಲಿಲ್ಲ. ಇದು ಸಾರ್ವಜನಿಕರಲ್ಲಿ ರೋಷಕ್ಕೆ ಕಾರಣವಾಗಿದೆ.

ಕುಂಬಳೆ ಕರಾವಳಿ ವಲಯದ ಮೀನು ಕಾರ್ಮಿಕರು, ಸಮೀಪದ ಕೃಷಿಕರು, ನಗರದಲ್ಲಿರುವ ಸರಕಾರಿ ಶಾಲೆ ಸಹಿತದ ೫ರಷ್ಟು ಶಿಕ್ಷಣಸಂಸ್ಥೆಗಳ ಮಕ್ಕಳು, ವ್ಯಾಪಾರಿಗಳು, ನೌಕರರು ಎಲ್ಲಾ ರೋಗ ತಗಲಿದರೆ ಆಶ್ರಯಿಸು ವುದು ಈ ಸರಕಾರಿ ಆಸ್ಪತ್ರೆಯನ್ನಾಗಿದೆ. ಹೆಂಚು ಹಾಸಿದ ಹಳೆಯದಾದ ಆಸ್ಪತ್ರೆಯ ಪ್ರಧಾನ ಕಟ್ಟಡ ಸೋರುತ್ತಿದೆ. ಇದರಿಂದಾಗಿ ಕಳೆದ ವರ್ಷ ಇದನ್ನು ಮುಚ್ಚುಗಡೆಗೊಳಿಸಲಾಯಿತು. ಈ ಮೊದಲು ಇದ್ದ ದಾಖಲಾತಿ ಚಿಕಿತ್ಸೆ ಈಗ ಇಲ್ಲ. ಕಟ್ಟಡಕ್ಕೆ ೬೮ ವರ್ಷದ ಹಳಮೆ ಇದೆ. ಹೀಗಿದ್ದು, ಪುನರ್ ನಿರ್ಮಾಣಕ್ಕೆ ಬೇಡಿಕೆ ಮಾತ್ರವೇ ಕೇಳಿ ಬರುತ್ತಿರುವುದು. ಈ ಮಧ್ಯೆ ಮಂಜೂರು ಮಾಡಲಾಗಿದೆ ಎಂದು ಹೇಳಲ್ಪಡುವ ನಿಧಿ ಉಪಯೋಗಿಸಿ ಕಟ್ಟಡ ನಿರ್ಮಾಣ ತ್ವರಿತಗತಿಯಲ್ಲಿ ನಡೆಸಲು, ಆಸ್ಪತ್ರೆಯ ಮೂಲಭೂತ ಸೌಕರ್ಯ ಖಚಿತಪಡಿಸಲು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು, ಸಂಘ ಸಂಸ್ಥೆಗಳು ಆಗ್ರಹಿಸುತ್ತಿವೆ.

You cannot copy contents of this page