ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಸಹಸ್ರ ಕಲಶಾಭಿಷೇಕ-ಬ್ರಹ್ಮಕಲಶಾಭಿಷೇಕ ನಾಳೆ ನಡೆಯಲಿರುವುದು. ನಾಳೆ ಮುಂಜಾನೆ ೫ರಿಂದ ಗಣಪತಿಹೋಮ, ಕವಾಟೋ ದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವಹೋಮಗಳ ಕಲಶಾಭಿಷೇಕ ನಡೆಯಲಿದೆ. ಅನಂತರ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲಮಂತ್ರಾಕ್ಷತೆ, ರಾತ್ರಿ ೭ರಿಂದ ಶ್ರೀ ದೇವರ ಉತ್ಸವಬಲಿ, ರಾತ್ರಿ ಪೂಜೆ ನಡೆಯಲಿದೆ.
ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ಸ್ವಾಮೀಜಿಯವರು ಆಶೀರ್ವಚ ನೀಡುವರು. ಸಂಜೆ 4 ಗಂಟೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಗುವುದು. 4.30 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಉದ್ಯಮಿ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಅಧ್ಯಕ್ಷತೆ ವಹಿಸುವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಪೆರಿಯ ಗೋಕುಲಂ ಗೋಶಾಲೆಯ ಬ್ರಹ್ಮಶ್ರೀ ವಿಷ್ಣು ಹೆಬ್ಬಾರ್ ಉಪಸ್ಥಿತರಿರುವರು. ವಾಗ್ಮಿ ದಾಮೋದರ ಶರ್ಮ ಬಾರ್ಕೂರು ಧಾರ್ಮಿಕ ಭಾಷಣ ಮಾಡುವರು. ಹಲವು ಗಣ್ಯರು ಉಪಸ್ಥಿತರಿರುವರು.
ನಟರಾಜ ವೇದಿಕೆಯಲ್ಲಿ ನಾಳೆ ಬೆಳಿಗ್ಗೆ 9ರಿಂದ ಭಕ್ತಿರಸಧಾರೆ, 10.30 ರಿಂದ ವೀಣಾವಾದನ, 1 ಗಂಟೆಗೆ ಶಾಸ್ತ್ರೀಯ ಸಂಗೀತ, ೨ರಿಂದ ಭಕ್ತಿಝೇಂಕಾರ, ರಾತ್ರಿ 9ರಿಂದ ವಯೋಲಿನ್ ಫ್ಯೂಶನ್ ಗಂಗಾತರಂಗಂ, ಕೈಲಾಸ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ ಶಾಸ್ತ್ರೀಯ ಸಂಗೀತ, 11ರಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 8ರಿಂದ ಭಕ್ತಿಗಾನಲಹರಿ, 3.30ರಿಂದ ಶಾಸ್ತ್ರೀಯ ಸಂಗೀತ, 4.30ರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.







