ಕುಂಬಳೆ: ಆಗಾಗ ಉಂಟಾಗುತ್ತಿರುವ ಅಘೋಷಿತ ವಿದ್ಯುತ್ ಪವರ್‌ಕಟ್‌ಗೆ ಕೂಡಲೇ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಕುಂಬಳೆಯಲ್ಲಿ ಮುಸ್ಲಿಂ ಲೀಗ್ ಜನಪ್ರತಿನಿಧಿಗಳು ಕೆಎಸ್‌ಇಬಿ ಕಚೇರಿ ದಿಗ್ಬಂಧನ ನಡೆಸಿದರು. ಮುಸ್ಲಿಂ ಲೀಗ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ದಿಗ್ಬಂಧನ ನಡೆಸಲಾಗಿದೆ. ಪಂಚಾಯತ್ ಸಮಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಪಿ. ಖಾಲಿದ್, ಇನಾಸ್ ಪವಾಸ್, ಸದಸ್ಯರಾದ ಫಲ್ಸರ್, ಸಾಬುರ ನೇತೃತ್ವ ನೀಡಿದರು. ಬಿ.ಎನ್. ಮೊಹಮ್ಮದಾಲಿ ಅಧ್ಯಕ್ಷತೆ ವಹಿಸಿದರು. ಎ.ಕೆ. ಆರೀಫ್ ಉದ್ಘಾಟಿಸಿದರು. ಪವರ್ ಕಟ್ ಹೊರತುಪಡಿಸದಿದ್ದರೆ ಇಲೆಕ್ಟ್ರಿಸಿಟಿ ಸೆಕ್ಷನ್ ಕಚೇರಿ ಮುಂಭಾಗ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಸ್ಥಳೀಯರು ಮುಂದಾಗುವರೆಂದು ಲೀಗ್ ಮುನ್ನೆಚ್ಚರಿಕೆ ನೀಡಿದೆ.







