ತೆಂಗಿನ ಮರದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಇಲಿ ವಿಷ ಸೇವಿಸಿ ಆತ್ಮಹತ್ಯೆ

ಕಾಸರಗೋಡು: ಮನೆ ಯಂಗಳದ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು  ೧೩ ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ ಯುವಕ ಇಲಿವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ವೆಳ್ಳರಿಕುಂಡ್ ಬಳಾಲ್ ಪಡಯಂಗಲ್ ನಿವಾಸಿ ಕುಂಞಿರಾಮನ್‌ರ ಪುತ್ರ ಕೆ. ಬೈಜು (೩೮) ಆತ್ಮಹತ್ಯೆಗೈದ ಯುವಕ. ಗುರುವಾರ ಅಪರಾಹ್ನ ಬೈಜು ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತಾದರೂ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ೧೩ ವರ್ಷದ ಹಿಂದೆ ಮನೆಯಂಗಳದ ತೆಂಗಿನ ಮರಕ್ಕೆ ಹತ್ತಿದಾಗ ಬಿದ್ದು ಗಾಯಗೊಂಡಿದ್ದರು. ಆ ಬಳಿಕ ಶಯ್ಯಾವಲಂಬಿಯಾಗಿದ್ದರು. ವೆಳ್ಳರಿಕುಂಡ್ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page