ಮಂಜೇಶ್ವರ: ಹೊಸಂಗಡಿ ಬಳಿಯ ಬಂಗ್ರಮAಜೇಶ್ವರ ರಸ್ತೆಯ ತಿರುವುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿ ವಾಹನ ಸವಾರರಿಗೆ ಆತಂಕವನ್ನುAಟುಮಾಡು ತ್ತಿದೆ. ಈ ತಂತಿ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಹಾಗೂ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಕೂಡಾ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಇದೆ. ಈ ದಾರಿಯಾಗಿ ಕಟ್ಟೆ ಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಸಂಬAಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಈ ತಂತಿಯನ್ನು ತೆರವುಗೊಳಿಸಿ ಇನ್ನೊಂದು ಭಾಗದಲ್ಲಿ ಅಳವಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.







