ಕಣ್ಣೂರು: ಸ್ವಂತ ತಾಯಿಯನ್ನು ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ ನಡೆದಿದೆ. ಕೃತ್ಯದ ಬಳಿಕ ಆರೋಪಿ ಪುತ್ರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಕೇಳಗಂ ಕೊಳಕ್ಕಾಡ್ ತಾನಿಕುನ್ನು ವಿನ ಮಡತ್ತಿಪರಂಬಿಲ್ ತಂಗಚ್ಚನ್ ಎಂಬವರ ಪತ್ನಿ ಗೀತಮ್ಮ (50) ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಇವರನ್ನು ಪುತ್ರ ಕ್ರಿಸ್ಟಿ (25) ಕುತ್ತಿಗೆ ಇರಿದು ಕೊಲೆಗೈದಿರುವುದಾಗಿ ದೂರಲಾಗಿದೆ. ಕೊಲೆಗೀಡಾದ ಗೀತಮ್ಮ ಮಹಿಳಾ ಮೋರ್ಛಾ ಕಣ್ಣೂರು ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದಾರೆ. ನಿನ್ನೆ ರಾತ್ರಿ 10.30ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಗೀತಮ್ಮರೊಂದಿಗೆ ಕ್ರಿಸ್ಟಿ ವಾಗ್ವಾದ ನಡೆಸಿದ್ದು, ಬಳಿಕ ಬೆಡ್‌ರೂಂಗೆ ತೆರಳಿ ಗೀತಮ್ಮರ ಕುತ್ತಿಗೆಗೆ ಇರಿದಿರುವು ದಾಗಿ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದ ಕ್ರಿಸ್ಟಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕು ಗೊಳಿಸಿ ಮನೆಗೆ ಮರಳಿದ್ದನು. ಈತ ಮಾದಕವಸ್ತುಗಳ ಚಟ ಹೊಂದಿದ್ದ ನೆಂದು ಹೇಳಲಾಗುತ್ತಿದೆ. ಕೊಲೆಕೃತ್ಯ ನಡೆಯುವ ಹೊತ್ತಿನಲ್ಲಿ ತಂಗಚ್ಚನ್ ಮನೆಯಲಿ ರಲಿಲ್ಲ. ಕೊಲೆಯ ಬಳಿಕ ಕ್ರಿಸ್ಟಿ ನೆರೆಮನೆಯ ಯುವಕನನ್ನು ಕರೆಸಿ ಆತನ ಸ್ಕೂಟರ್‌ನಲ್ಲಿ ಕೇಳಗಂ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ. ಬಳಿಕ ಪೊಲೀಸರು ತಲುಪಿ ಗೀತಮ್ಮರನ್ನು ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ಮೃತದೇಹವನ್ನು ಪೇರಾವೂರು ಆಸ್ಪತ್ರೆಯಲ್ಲಿರಿಸಲಾಗಿದೆ.
ಗೀತಮ್ಮ ಕೇಳಗ ಹಾಗೂ ತಾನಿಕುನ್ನು ಎಂಬಿಡೆಗಳಲ್ಲಿ ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು. ಕ್ರಿಸ್ಟಿಯ ಹೊರತು ಗೀತಮ್ಮರಿಗೆ ಓರ್ವೆ ಮಗಳಿದ್ದಾಳೆ. ಪೇರಾವೂರು ಡಿವೈಎಸ್ಪಿ ಚಂದ್ರಮೋಹನ್, ಕೇಳಗಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.






