ತಂದೆಯನ್ನು ಕಡಿದು ಗಾಯಗೊಳಿಸಿದ ಪುತ್ರ: ಕೊಲೆಯತ್ನ ಪ್ರಕರಣ ದಾಖಲು; ಆರೋಪಿ ಕಸ್ಟಡಿಗೆ

ಕಾಸರಗೋಡು: ತಂದೆಯನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ ದೂರಿನಂತೆ ಪುತ್ರನ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೆಕ್ಕಿಲ್ ಗ್ರಾಮದ ಬೆಂಡಿಚ್ಚಾಲ್ ತಾಯಲ್ ಹೌಸ್‌ನ ಅಹಮ್ಮದ್ ಇರ್ಶಾದ್ (28) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಿಕೊಂಡಿದ್ದು,  ಆರೋಪಿಯನ್ನು  ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಬೆಂಡಿಚ್ಚಾಲ್  ತಾಯಲ್  ಹೌಸ್‌ನ ಮೊಹಮ್ಮದ್ ಕುಂಞಿ (55)ಯವರಿಗೆ  ಕಡಿದು ಗಂಭೀರ ಗಾಯಗೊಳಿಸಿದ ಬಗ್ಗೆ ಅವರು ನೀಡಿದ ದೂರಿನಂತೆ ಅಹಮ್ಮದ್ ಇರ್ಷಾದ್‌ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹಮ್ಮದ್ ಇರ್ಷಾದ್ ತಂದೆ ಮೊಹಮ್ಮದ್ ಕುಂಞಿಯಿಂದ ಪದೇ ಪದೇ ಹಣ ಕೇಳುತ್ತಿದ್ದನೆಂದೂ  ಆದ್ದರಿಂದ ಆತನ ಉಪಟಳ ತಾಳತಾರದೆ ಮೊಹಮ್ಮದ್ ಕುಂಞಿ ಚೆಂಗಳ ತೊಟ್ಟಿ ಪಾಣಲಂನ ಸಹೋ ದರಿ ಮರಿಯಮ್ಮಳ ಮನೆಯಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿದ್ದರೆನ್ನಲಾಗಿದೆ.  ಆರೋಪಿ ನಿನ್ನೆ ಆ ಮನೆಗೆ ತಲುಪಿ ತಂದೆಯಿಂದ ಹಣ ಕೇಳಿದ್ದನೆಂದೂ, ಹಣ ನೀಡದ ದ್ವೇಷದಿಂದ ಆರೋಪಿ ಕತ್ತಿಯಿಂದ ಮೊಹಮ್ಮದ್ ಕುಂಞಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page