ಕಯ್ಯಾರು ಪೊನ್ನೆತ್ತೋಡು ಮಹಿಳಾ ಯಕ್ಷಕೂಟ,ಬಾಲಕಲಾವಿದರ ಯಕ್ಷಕಲಾ ಕೇಂದ್ರದ ವಾರ್ಷಿಕೋತ್ಸವ

ಉಪ್ಪಳ: ಮಹಿಳಾ ಯಕ್ಷಕೂಟ ಹಾಗೂ ಬಾಲಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ಈ ಎರಡೂ ತರಬೇತಿ ಕೇಂದ್ರದ 11ನೇ ವಾರ್ಷಿಕೋತ್ಸವ ಮೇ 2 ಹಾಗೂ 3ರಂದು ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ ಅಡ್ಕದಲ್ಲಿ ಜರಗಲಿದೆ. ೨ರಂದು ಬೆಳಿಗ್ಗೆ 10 ಗಂಟೆಗೆ ವಾರ್ಷಿಕೋತ್ಸವದ ಉದ್ಘಾಟನೆ,11 ರಿಂದ ಮಹಿಳಾ ಯಕ್ಷಕೂಟದ ಸದಸ್ಯರಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳ, 3ಕ್ಕೆ ಪೂರ್ವರಂಗ ವೈಭವ ಹಾಗೂ 5 ಗಂಟೆಯಿದ ಬಾಲ ಕಲಾವಿದರ ಕೇಂದ್ರದ ವಿದ್ಯಾರ್ಥಿಗಳಿಂದ ಕೃಷ್ಣ ಲೀಲೆ ಆಗ್ರ ಪೂಜೆ ಯಕ್ಷಗಾನ ಬಯಲಾಟ ಜರಗಲಿದೆ. 3ರಂದು ಬೆಳಿಗ್ಗೆ 10ಕ್ಕೆ ಮಹಿಳಾ ಕಲಾವಿದರಿಂದ ‘ಸಮರ ಸೌಗಂಧಿಕಾ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 2ಕ್ಕೆ ಶ್ರೀಹರಿ ಬಾಲಗೋಕುಲದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ೩ಕ್ಕೆ ಜರಗುವ ಸಮಾರೋಪ ಸಮಾರಂಭವನ್ನು ಎಡನೀರು ಸ್ವಾಮೀಜಿ ಉದ್ಘಾಟಿಸಲಿದ್ದು, ಉದ್ಯಮಿ ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸುವರು.2026 ನೇ ಸಾಲಿನ ಯಕ್ಷ ಕಯ್ಯಾರು ಪ್ರಶಸ್ತಿಯನ್ನು ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರದಾನ ಮಾಡಲಾಗುವುದು. ಜೊತೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿಕ್ಕಿದೆ. ಸಾಯಂಕಾಲ 6 ಗಂಟೆಗೆ ಬಾಲ ಕಲಾವಿದರ ಕೇಂದ್ರದ ವಿದ್ಯಾರ್ಥಿಗಳಿಂದ ವೀರಾಂಜನೇಯ ಯಕ್ಷಗಾನ ಪ್ರದರ್ಶನ ಜರಗಲಿದೆ.

You cannot copy contents of this page