ಕನಿಲ ಕ್ಷೇತ್ರಕ್ಕೆ ಕೊಪ್ಪರಿಗೆ ಸಮರ್ಪಣೆ

ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಮಚ್ಚಂಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯಪಾತ್ರೆ (ಕೊಪ್ಪರಿಗೆ) ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗುರಿಕ್ಕಾರರಾದ ಪುರುಷೋತ್ತಮ, ಪ್ರಸಾದ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ, ಜಯರಾಜ್ ಬಜಾಲ್, ಶಿವಕುಮಾರ ಬಳ್ಳೂರು, ಸುರೇಶ್ ಬೋಳ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲು, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತ ತೌಡುಗೋಳಿ, ಚಿರಶ್ರೀ, ಚಂದ್ರಾವತಿ, ನಾರಾಯಣ, ವಿನೋದ್ ಭಾಗವಹಿಸಿದರು.

You cannot copy contents of this page