ಬೋಳಂಗಳ ಸ್ಮಶಾನ ಪರಿಸರದ ರಸ್ತೆ ಬದಿ ವ್ಯಾಪಕ ಪ್ಲಾಸ್ಟಿಕ್  ತ್ಯಾಜ್ಯ: ಶುಚೀಕರಣಕ್ಕೆ ಒತ್ತಾಯ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಳಾಯಿ ರಸ್ತೆಯ ಬೋಳಂಗಳ ಸ್ಮಶಾನದ ಸಮೀಪದ ರಸ್ತೆ ಬದಿಯಲ್ಲಿ ವ್ಯಾಪಕ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಶುಚೀಕರಣಕ್ಕೆ ಒತ್ತಾಯಿಸಿದ್ದಾರೆ. ನೂರಾರು ಮಂದಿ ಸಂಚರಿಸುವ ರಸ್ತೆ ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಉಪೇಕ್ಷಿಸಗುv್ತದ್ದು ಇದು ಹರಡಿ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿರುವುದಾಗಿ ದೂರಲಾಗಿದೆ. ತ್ಯಾಜ್ಯ ಉಪೇಕ್ಷಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆAದು ನಾಗರಿಕರು ಒತ್ತಾಯಿಸಿದ್ದಾರೆ. ಕೂಡಲೇ ಶುಚೀಕರಣಗೊಳಿಸದಿದ್ದಲ್ಲಿ ಮುಂದಿನ ಮಳೆೆಗಾಲದಲ್ಲಿ ಶೋಚನೀಯÁವಸ್ಥೆಗೆ ತಲುಪಿ ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ. ಅಲ್ಲದೆ ಪಂಚಾಯತ್ ವ್ಯಾಪ್ತಿಯ ಸಜಂಕಿಲ, ಪೊಸಡಿಗುಂಪೆ ಸಹಿತ ಪರಿಸರ ಪ್ರದೇಶಗಳಲ್ಲೂ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದು, ಸಂಬAಧಪಟ್ಟ ಪಂಚಾಯತ್, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಊರ ನಾಗರಿಕರು ಒತ್ತಾಯಿಸಿದ್ದಾರೆ.

You cannot copy contents of this page