ನಾಗರ ಹಾವು ಕಡಿತ : ಚಿಕಿತ್ಸೆಯಲ್ಲಿದ್ದ ಮಗು ಮೃತ್ಯು

ಕಾಸರಗೋಡು: ನಾಗರ ಹಾವಿನ ಕಡಿತಕ್ಕೊಳಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಮೃತಪಟ್ಟಿದೆ.  ವೆಳ್ಳೆರಿಕುಂಡು ತಾಲೂಕಿನ ನರ್ಕಿಲಕ್ಕಾಡ್ ಎಳೇರಿತಟ್ಟ್ ತೊಟ್ಟಿ ಉನ್ನತಿಯ ಕುರುವಾಟ್ ವೀಟಿಲ್‌ನ ಶರತ್‌ಚಂದ್ರನ್-ಅಜಿತ ದಂಪತಿಯ ಪುತ್ರಿ ಋತುಚಂದ್ರ (ನಾಲ್ಕೂವರೆ ವರ್ಷ) ಮೃತಪಟ್ಟ ಮಗುವಾಗಿದೆ.

ಕಳೆದ ಸೋಮವಾರ ಮಗುವಿಗೆ ಮನೆ ಪರಿಸರದಲ್ಲಿ ಹಾವು ಕಡಿದಿತ್ತು. ಆಟವಾಡುತ್ತಿದ್ದಾಗ ದೂರಕ್ಕೆ ಬಿದ್ದ ಚೆಂಡನ್ನು ಹೆಕ್ಕಲು ಹೋದ ವೇಳೆ ಮಗುವಿಗೆ ನಾಗರಹಾವು ಕಡಿದಿತ್ತು. ಇದರಿಂದ ಅಸ್ವಸ್ಥಗೊಂಡ ಮಗುವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page