ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊ ಬ್ಬರು ಸೇತುವೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೂಡ್ಲು ತೈವಳಪ್ ಹೌಸ್‌ನ ರಾಮಚಂದ್ರ ಗಟ್ಟಿ (75) ಮೃತ ವ್ಯಕ್ತಿ. ಶಿವಮಂಗಲದ ಸೇತುವೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದ್ದಾರೆ. ವಿಷಯತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ರಾಚಂದ್ರ ಗಟ್ಟಿಯವರ ಪತ್ನಿ ಲೀಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಜಯಂತ, ರವಿ, ಹರಿಪ್ರಸಾದ್, ಜಯಶ್ರೀ, ಅಳಿಯ ರಾಜೇಶ, ಸೊಸೆ ರೇವತಿ, ಸಹೋದರ ಕೃಷ್ಣ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page