ಕಾರು ಸ್ಕೂಟರ್‌ಗೆ ಢಿಕ್ಕಿ: ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತ್ಯು

ತಿರುವನಂತಪುರ: ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತಪಟ್ಟರು. ಕಲ್ಲಿಯೂರ್ ಪೆರಿಂಙಮಲ ಸಾಫಲ್ಯ ನಿವಾಸಿ ಎಸ್. ಮಧು (42) ಮೃತಪಟ್ಟವರು. ವಳುದಕ್ಕಾಡ್ ಟ್ರಾನ್ಸ್‌ಪೋರ್ಟ್ ಕಮಿಷನರೇಟ್‌ನ ನೌಕರನಾಗಿದ್ದಾರೆ. ವಿಳಿಂಞ ಭಾಗದಿಂದ ಬಾಲರಾಮಪುರ ಭಾಗಕ್ಕೆ ತೆರಳುತ್ತಿದ್ದ ಕಾರು ಮುಂಭಾಗದಿಂದ ಬಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ರಸ್ತೆಗೆ ಬಿದ್ದ ಮಧು ಅವರ ತಲೆಗೆ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯವುಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸೌಮ್ಯ, ಪುತ್ರಿ ಸಾಫಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page