ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ

ಕುಂಬಳೆ: ವಾಣಿಜ್ಯ ಅಗತ್ಯ ಗಳಿಗಾಗಿರುವ ಗ್ಯಾಸ್ ಸಿಲಿಂಡರ್‌ನ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಯೂನಿಟ್ ಘಟಕ ಕುಂಬಳೆಯಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಈ ವೇಳೆ ಮಾತನಾಡಿದ ಕೆಎಚ್‌ಆರ್‌ಎ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸಿಲಿಂಡರ್‌ನ ಅಪರಿಮಿತ ಬೆಲೆ ಹೆಚ್ಚಳದಿಂದ ಹೋಟೆಲ್ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಿಸಬೇಕಾದ ಸನ್ನಿವೇಶವಿದೆ ಎಂದು ಕೇಂದ್ರ ಸರಕಾರದ ಈ ನಿಲುವನ್ನು ಪ್ರತಿಭಟಿಸಿ ಹೋಟೆಲ್‌ಗಳನ್ನು ಮುಚ್ಚುವಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ತಿಳಿಸಿದರು. ಪಂಜಿನ ಮೆರವಣಿಗೆಯನ್ನು ಅವರು ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಗಸ್ಸಾಲಿ ಮಾತನಾಡಿದರು. ಕುಂಬಳೆ ಘಟಕ ಅಧ್ಯಕ್ಷ ಸಿದ್ದಿಕ್ ಮುಬಾರಕ್, ಕಾರ್ಯದರ್ಶಿ ಸವಾದ್, ಕೋಶಾಧಿಕಾರಿ ಚರಣ್ ಕುಮಾರ್, ಜೊತೆ ಕಾರ್ಯದರ್ಶಿಗಳಾದ ಆರ್. ಅರ್ಫಾತ್, ಮುನೀರ್, ಎನ್. ಅಬ್ದುಲ್ಲ, ಮಮ್ಮು ಮುಬಾರಕ್, ವೆಂಕಟೇಶ್ವರ ಹೆಬ್ಬಾರ್ ನೇತೃತ್ವ ನೀಡಿದರು.

You cannot copy contents of this page