ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೀಯಪದವು ಬಳಿಯ ಚಿಗುರುಪಾದೆ ನಿವಾಸಿ ಮೋಹನ್ ದಾಸ್‌ರ ಪುತ್ರ ರಂಜಿತ್ (40) ಮೃತ ಯುವಕನಾಗಿದ್ದಾರೆ. ಇವರು ಸೆಂಟ್ರಿಂಗ್ ಕಾರ್ಮಿಕನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ರಂಜಿತ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ರಂಜಿತ್‌ರ ಪತ್ನಿ ಹಾಗೂ ಮಕ್ಕಳು ಸೋಮವಾರ ವಿಟ್ಲದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಇದೇ ವೇಳೆ ತಂದೆ ಹಾಗೂ ತಾಯಿ ಮಂಗಳೂರಿನಲ್ಲಿ ಸಂಬಂಧಿಕ ರೋರ್ವರು ನಿಧನರಾದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದು, ಇದರಿಂದ ರಂಜಿತ್ ಮಾತ್ರವೇ ಮನೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ರಂಜಿತ್ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಅಲ್ಲಿಗೆ ತಲುಪಿ ನೋಡಿದಾಗ ಲೈಟ್‌ಗಳು ಉರಿಯುತ್ತಿದ್ದು, ಫ್ಯಾನ್ ತಿರುಗುತ್ತಿರುವುದು ಕಂಡುಬಂದಿದೆ. ಕರೆದರೂ ಪ್ರತಿಕ್ರಿಯೆ ಉಂಟಾಗದುದರಿಂದ ಕಿಟಿಕಿ ಮೂಲಕ ನೋಡಿದಾಗ ಅಡುಗೆ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂ ದಿದೆ. ಕೂಡಲೇ ಸಂಬಂಧಿಕರನ್ನು ಸೇರಿಸಿ ಅವರನ್ನು ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ನಿಧನ ಸಂಭವಿಸಿತ್ತೆನ್ನಲಾಗಿದೆ. ಮೃತದೇಹವನ್ನು  ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ  ಬೇರಿಕೆ ಸ್ಮಶಾನದಲ್ಲಿ ನಡೆಸಲಾಯಿತು.

ಮೃತರು ತಂದೆ, ತಾಯಿ ಯಶೋಧ, ಪತ್ನಿ ಜಯಂತಿ, ಮಕ್ಕಳು ವಂಶಿಕ್, ದಿಶಾ,ಸಹೋದರ ನೀರೇಶ್,ಸಹೋದರಿ ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page