ಮಂಜೇಶ್ವರ: ಹೊಸಂಗಡಿಯಿAದ ಆನೆಕಲ್ಲು ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಪಾಯ ಭೀತಿಯುಂಟುಮಾಡುವ ಹಲವು ಮರಗಳಿವೆ. ಈ ರಸ್ತೆ ಉದ್ದಕ್ಕೂ ಇಕ್ಕೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಆತಂಕವನ್ನುAಟುಮಾಡುತ್ತಿದೆ. ಮರದ ಬೃಹತ್ ರೆಂಬೆಗಳು ರಸ್ತೆಗೆ ಬಾಗಿಕೊಂಡು ವಾಹನಗಳಿಗೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆ ಗಾಳಿಗೆ ಇದೇ ರಸ್ತೆಯ ಅಲ್ಲಲ್ಲಿ ಮರಗಳು ಧರಾಶಾಯಿಗಿದ್ದು, ಕೆಲವು ವಾಹನಗಳಿಗೆ ಹಾನಿ ಹಾಗೂ ಇನ್ನೂ ಕೆಲವು ಸವಾರರು ಅಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮಳೆ, ಗಾಳಿಗೆ ಮರ ಬಿದ್ದು ದುರಂತ ಸಂಭವಿಸುವ ಮುನ್ನವೇ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಗೆ ಬಾಗಿಕೊಂಡಿರುವ ರೆಂಬೆಗಳು ಹಾಗೂ ಅಪಾಯದಂಚಿನಲ್ಲಿರುವ ಮರವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.







