ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಮಂಗಲ್ಪಾಡಿ: ಆರ್.ಎಸ್.ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಪ್ರತಾಪನಗರ ನಿವಾಸಿ ಎಂ.ಇ ಗಂಗಾಧರ ಆಚಾರ್ಯ ((65) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮರದ ಕೆಲಸಗಾರರಾಗಿದ್ದರು. ಬಿ.ಎಂ.ಎಸ್ ನಿರ್ಮಾಣ ಔ್ತೆ್ನ%ಔ್ಣ ್ಚ್ಣಒಙ್ಣಟವ್ರಿ¾್ಣ್ನ ಮಾಜಿ ಜಿಲ್ಲಾ ಉಪಾಧ್ಯಾಕ್ಷರು, ಶ್ರೀ ಗಾಯತ್ರಿ ವಿಶ್ವಕರ್ಮ ಸಮಾಜ ಸಭಾ ಪ್ರತಾಪನಗರ ಮಂಗಲ್ಪಾಡಿ ಇದರ ಮಾಜಿ ಅಧ್ಯಕ್ಷರಾಗಿದ್ದರು. ದಿ| ಈಶ್ವರ ಆಚಾರ್ಯ- ದಿ| ಪದ್ಮಾವತಿ ದಂಪತಿ ಪುತ್ರರಾಗಿದ್ದಾರೆ. ಮೃತರು ಪತ್ನಿ ಕಲಾವತಿ, ಮಕ್ಕಳಾದ ಯಶಸ್ವಿನಿ, ಕೀರ್ತಿಶ್ರೀ, ಮಿಥುನ್ ಆಚಾರ್ಯ, ಸಹೋದರ-ಸಹೋದರಿಯರಾದ ಜನಾರ್ದನ ಆಚಾರ್ಯ, ಮಾಧವ ಆಚಾರ್ಯ, ಯಮುನ, ಲೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರರಾದ ಶೇಷಪ್ಪ ಆಚಾರ್ಯ, ಚಂದ್ರಶೇಖರ ಆಚಾರ್ಯ, ಸಹೋದರಿ ಸತ್ಯಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.
ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ನೂರಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಪ್ರತಾಪನಗರ ಶ್ರೀ ಗಾಯತ್ರಿ ವಿಶ್ವಕರ್ಮ ಮಂದಿರ ಸಮಿತಿ, ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರ ಸಮಿತಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page