ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್‌ಗೆ ಹೊಂದಿಕೊA ಡಿರುವ ರಸ್ತೆಯನ್ನು ನವೀಕರಣ ಗೊಳಿಸಿ ಅಭಿವೃದ್ದಿಪಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ಮಳೆ ನೀರು ಕಟ್ಟು ನಿಲ್ಲುವುದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ಎರಡು ವರ್ಷದ ಹಿಂದೆ ಇಂಟರ್‌ಲಾಕ್ ಅಳವಡಿಸಿ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ. ಆದರೆ ಸಮತಟ್ಟು ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊAಡು ವಾಹನ ಸಂಚಾರದ ವೇಳೆ ನಡೆದು ಹೋಗುವರ ಮೇಲೆ ಕೆಸರು ನೀರು ಎರಚುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಗೇಟ್ ಹಾಕಿದ ವೇಳೆ ವಾಹನಗಳು ನೀರಿನಲ್ಲಿ ನಿಲ್ಲಬೇಕಾಗುತ್ತಿದೆ. ಕಳಪೆ ಕಾಮಗಾರಿ ಕಾರಣವೆಂದು ನಾಗರಿಕರು ದೂರಿದ್ದಾರೆ.



