ಕಾಸರಗೋಡು: ಕಾವುಗೋಳಿ ಯಲ್ಲಿ ಕಡಲ್ಕೊರೆತ ಹಾಗೂ ಸಮುದ್ರದ ಅಬ್ಬರ ತೀವ್ರಗೊಂಡು ರಸ್ತೆಗಳು ಮತ್ತು ಕರಾವಳಿ ಪ್ರದೇ ಶಗಳು ಹಾನಿಗೊಳಗಾಗಿದ್ದರೂ, ಸಾರ್ವಜನಿಕರ ಜೀವ ಮತ್ತು ಸ್ವತ್ತಿನ ರಕ್ಷಣೆಗೆ ರಾಜ್ಯ ಸರಕಾರ ಹಾಗೂ ಸಂಬAಧಪಟ್ಟ ಇಲಾಖೆಗಳು ಉದಾಸೀನತೆ ತೋರಿಸುತ್ತಿದೆ ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಆರೋಪಿಸಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಕಾವುಗೋಳಿ ಕಡಲತೀರದಲ್ಲಿ ವರ್ಷಗಳಿಂದ ಜನರು ಎದುರಿ ಸುತ್ತಿರುವ ಕಡಲ್ಕೊರೆತದ ಭೀತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕಡಲಬ್ಬರಕ್ಕೆ ರಸ್ತೆಗಳು ಸಮುದ್ರದ ಪಾಲಾಗಿ ಸಂಪೂರ್ಣ ಧ್ವಂಸಗೊA ಡಿವೆ. ಯಾವುದೇ ಕ್ಷಣದಲ್ಲೂ ಸಮುದ್ರದ ನೀರು ಮನೆಗಳಿಗೆ ನುಗ್ಗುವ ಭೀತಿದಾಯಕ ವಾತಾವರಣದಲ್ಲಿ ಇಲ್ಲಿನ ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ದಿನ ಕಳೆಯುವಂತಾಗಿದೆ.
ಇಲಾಖೆಗಳ ವೈಫಲ್ಯ
ದುರಂತ ನಿರ್ವಹಣಾ ಇಲಾಖೆ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ಈ ಪ್ರದೇಶದ ಜನರಿಗೆ ತಕ್ಷಣದ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಅಥವಾ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಇದುವರೆಗೆ ಮುಂದಾಗಿಲ್ಲ. ಕಡಲ್ಕೊರೆತವನ್ನು ತಡೆಯಲು ‘ಟೆಟ್ರಾಪೋಡ್’ ಕಡಲತಡೆ ಗೋಡೆ ಅಥವಾ ಇತರ ಶಾಶ್ವತ ಕರಾವಳಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನೀರಾವರಿ ಮತ್ತು ಕರಾವಳಿ ಇಂಜಿನಿಯರಿAಗ್ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಕಾಸರಗೋಡು ಮಂಡಲ ಬಿಜೆಪಿ ಆರೋಪಿಸಿದೆ.
ಲೋಕೋಪಯೋಗಿ, ಪಂಚಾಯತ್ ಇಲಾಖೆ ಹಾಗೂ ಶಾಸಕ/ಸಂಸದರ ಮೌನ
ಧ್ವಂಸಗೊAಡ ರಸ್ತೆಗಳನ್ನು ದುರಸ್ತಿಗೊಳಿಸಲು ಅಥವಾ ಸಂಚಾರ ಪುನರಾರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಸಂಪೂರ್ಣವಾಗಿ ಒಂಟಿಯಾಗಿದ್ದಾರೆ. ಕರಾವಳಿಯ ಬಡ ಜನರ ಜೀವನದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. ಕಾವುಗೋಳಿ ಕಡಲತೀರದ ಕುಟುಂಬಗಳ ಆತಂಕವನ್ನು ನಿವಾರಿಸಲು ಸಂಬAಧಪಟ್ಟ ಇಲಾಖೆಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು.
ಬಿಜೆಪಿಯ ಪ್ರಮುಖ ಬೇಡಿಕೆಗಳು
ತಕ್ಷಣವೇ ಟೆಟ್ರಾಪೋಡ್ ಕಡಲತಡೆ ಗೋಡೆ ನಿರ್ಮಿಸಿ ಶಾಶ್ವತ ರಕ್ಷಣೆ ನೀಡಬೇಕು, ಧ್ವಂಸಗೊAಡ ರಸ್ತೆಗಳ ಪುನರ್ನಿರ್ಮಾಣಕ್ಕಾಗಿ ತುರ್ತು ಅನುದಾನ ಬಿಡುಗಡೆ ಮಾಡಬೇಕು, ಕಡಲ್ಕೊರೆತದ ಭೀತಿ ಎದುರಿಸುತ್ತಿರುವ ಕುಟುಂಬಗಳಿಗೆ ಅಗತ್ಯ ತುರ್ತು ಧನಸಹಾಯ ಮತ್ತು ನಷ್ಟ ಪರಿಹಾರ ಒದಗಿಸಬೇಕು. ಜನರ ನ್ಯಾಯಯುತ ಬೇಡಿಕೆಗಳನ್ನು ತಿರಸ್ಕರಿಸಿ ಸರ್ಕಾರ ಹೀಗೆಯೇ ನಿಷ್ಕ್ರೀಯತೆ ಮುಂದುವರಿಸಿದರೆ ಕಾವುಗೋಳಿಯ ಜನರನ್ನು ಸಂಘಟಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಎಚ್ಚರಿಸಿದ್ದಾರೆ.






