ನ್ಯುಮೋನಿಯ ಬಾಧಿಸಿ ಅಧ್ಯಾಪಕ ಮೃತ್ಯು

ಕಾಸರಗೋಡು: ನ್ಯುಮೋ ನಿಯ ಬಾಧಿಸಿ ಅಧ್ಯಾಪಕ ಮೃತಪಟ್ಟ ಘಟನೆ ನಡೆದಿದೆ. ಬಂದಡ್ಕ ಕರಿವೇಡಗಂ  ಸೈಂಟ್ ಮೇರಿಸ್ ಯುಪಿ ಶಾಲೆ ಅಧ್ಯಾಪಕನೂ ಕಣ್ಣೂರು ಆಲಕ್ಕೋಡ್ ಚಾಣೋ ಕುಂಡ್ ವರಿವೇಡನ್‌ಕುಂಡ್ ನಿವಾಸಿಯಾದ ಕಾಂಞಿರತ್ತು ಮುಟ್ಟಿಲ್ ಸಿಜೋ ಕೆ ಡೊಮಿನಿಕ್ (39) ಮೃತಪಟ್ಟ ದುರ್ದೈವಿ. ನ್ಯುಮೋನಿಯ ಬಾಧಿಸಿದ್ದ ಇವರನ್ನು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ದಿವಂಗತ ಡೊಮಿನಿಕ್-ಆಲಿಸ್ ದಂಪತಿಯ ಪುತ್ರನಾದ ಮೃತರು ಪತ್ನಿ ಜೋಯ್ಸಿ, ಮಕ್ಕಳಾದ  ಅನ್ಸ, ಅನ್ಶ್, ಸಹೋದರಿ ಜಿಷಾಸಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page