ಚಿರತೆಯ ಸೆರೆಗೆ ಗೂಡು ಇರಿಸಿದ ಸ್ಥಳಕ್ಕೆ ಬಿಜೆಪಿ ಪದಾಧಿಕಾರಿಗಳು ಭೇಟಿ

ಮುಳ್ಳೇರಿಯ: ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗೂಡು ಸ್ಥಾಪಿಸಿದ ಕಾರಡ್ಕ ಪಂಚಾಯತ್‌ನ 4ನೇ ವಾರ್ಡ್ ಆಲಂತಡ್ಕ ಜಯನಗರಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಪಂಚಾಯತ್ ಅಧ್ಯಕ್ಷೆ ಎಂ. ಜನನಿ, ಉಪಾಧ್ಯಕ್ಷ ದಾಮೋದರ ರಾವ್ ಸಹಿತ ಬಿಜೆಪಿ ತಂಡ ಭೇಟಿ ನೀಡಿತು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಕೆ., ಜನಪ್ರತಿನಿಧಿಗಳಾದ ವಸಂತಿ ಎ, ಬಾಲಕೃಷ್ಣನ್ ಎ, ಸವಿತಕುಮಾರಿ ಪಿ, ಪ್ರಶಾಂತ ಎಂ, ಸಿಡಿಎಸ್ ಚೆಯರ್ ಪರ್ಸನ್ ಪೂರ್ಣಿಮ ಸ್ಥಳ ಸಂದರ್ಶಿಸಿದರು. ಚಿರತೆಯನ್ನು ಸೆರೆ ಹಿಡಿದು ಜನರ ಭೀತಿ ದೂರಗೊಳಿಸಬೇಕೆಂದು ಈ ವೇಳೆ ತಂಡ ಆಗ್ರಹಿಸಿದೆ.

RELATED NEWS

You cannot copy contents of this page