ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ 24 ದಿನದಲ್ಲಿ 2.71 ಕೋಟಿ ರೂ. ಸಂಗ್ರಹ: ಅಧಿಕಾರಿಗಳಿಂದ ಬಹಿರಂಗ

ಕುಂಬಳೆ: ಕೇವಲ 24 ದಿನದ ಕಾರ್ಯಾಚರಣೆ ಮಧ್ಯೆ ಆರಿಕ್ಕಾಡಿ ಟೋಲ್ ಪ್ಲಾಜಾ ಮೂಲಕ 2.71 ಕೋಟಿ ರೂ.ಗಳಿಗೂ ಹೆಚ್ಚು ಟೋಲ್ ರೂಪದಲ್ಲಿ ಸಂಗ್ರಹಿಸಲಾ ಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಹಿರಂಗಪಡಿಸಿದೆ. ಮಾಹಿತಿ ಹಕ್ಕು ಪ್ರಕಾರ ನೀಡಿದ ಮನವಿಗೆ ಉತ್ತರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವಿಷಯ ಬಹಿರಂಗಪಡಿಸಿದೆ. ಟೋಲ್ ಪ್ಲಾಜಾದ ನಿರ್ಮಾಣಕ್ಕೆ 2.15 ಕೋಟಿ ರೂ. ವೆಚ್ಚವಾಗಿರುವು ದಾಗಿಯೂ ಉತ್ತರದಲ್ಲಿ ತಿಳಿಸ ಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣೂರು ಪ್ರೊಜೆಕ್ಟ್ ಇಂಪ್ಲಿಮೆಂಟೇಶನ್ ಘಟಕದಿಂದ ಮಾಹಿತಿ ಹಕ್ಕು ಮನವಿಗೆ ಉತ್ತರ ನೀಡಲಾಗಿದೆ. ಈ ಟೋಲ್ ಪ್ಲಾಜಾ ವಿರುದ್ಧ ತೀವ್ರ ಹೋರಾಟ ಕ್ರಿಯಾ ಸಮಿತಿ ನಡೆಸಿತ್ತು. ಅಲ್ಲದೆ ಕಾನೂನು ಹೋರಾಟವೂ ಉಂಟಾಗಿತ್ತು. ಬಳಿಕ ಹೈಕೋರ್ಟ್‌ನ ನಿರ್ದೇಶಾನುಸಾರ ಟೋಲ್ ಪ್ಲಾಜಾವನ್ನು ನಿಲ್ಲಿಸಲಾಗಿತ್ತು.

You cannot copy contents of this page