ಕಾಸರಗೋಡು: ಮಹಿಳೆಯರಿಗೆ ಕೆಎಸ್ಆರ್ಟಿಸಿ ಆರ್ಡಿನರಿ ಬಸ್ಗಳಲ್ಲಿ ಉಚಿತ ಪ್ರಯಾಣ ‘ಪ್ರಿಯದರ್ಶಿನಿ’ ಯೋಜನೆ ಜೂನ್ ೧೫ರಂದು ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿರುವನಂತಪುರ ತಂಬಾನೂರ್ ಬಸ್ ಟರ್ಮಿನಲ್ನಲ್ಲಿ ಮೊದಲ ಉಚಿತ ಪ್ರಯಾಣವನ್ನು ಉದ್ಘಾಟಿಸುವರು. ಉದ್ಘಾಟನಾ ಸಂಚಾರ ವೇಳೆ ಬಸ್ನಲ್ಲಿ ಚಾಲಕ, ನಿರ್ವಾಹಕ ಹಾಗೂ ಮಹಿಳೆಯರು ಮಾತ್ರವೇ ಇರುವರು. ಈ ಬಸ್ನಲ್ಲಿ ಮುಖ್ಯಮಂತ್ರಿ ಅಲ್ಪ ದೂರ ಪ್ರಯಾಣಿಸಲಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ರಾಜ್ಯದ ಎಲ್ಲಾ ಡಿಪ್ಪೋಗಳಲ್ಲೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಇದರ ಉದ್ಘಾಟನೆ ನಡೆಯಲಿದೆ. ಮೊದಲ ಹಂತದಲ್ಲಿ ಕೆಎಸ್ಆರ್ಟಿಸಿ ಯ 3125 ಆರ್ಡಿನರಿ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜ್ಯಾರಿಗೆ ಬರಲಿದೆ. ಪ್ರಾಯ, ರಾಜ್ಯವನ್ನು ಪರಿಗಣಿಸದೆ ಟ್ರಾನ್ಸ್ಜೆಂಡರ್ಗಳ ಸಹಿತ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ಪ್ರಯಾಣಿಸಬಹು ದಾಗಿದೆ. ಇದಕ್ಕೆ ಪ್ರತ್ಯೇಕ ನೋಂದಣಿ ಅಥವಾ ದಾಖಲೆಗಳ ಅಗತ್ಯವಿಲ್ಲ. ಪ್ರಯಾಣಿಕರು ಕಂಡಕ್ಟರ್ನಿಂದ ಝೀರೋ ಟಿಕೆಟ್ ಪಡೆಯಬೇಕು. ಇದೇ ವೇಳೆ ಕಾಸರಗೋಡು ಕೆಎಸ್ಆರ್ಟಿಸಿ ಡಿಪ್ಪೋದಿಂದ ಪ್ರಸ್ತುತ ೭೫ ಆರ್ಡಿನರಿ ಬಸ್ಗಳು ಸಂಚರಿಸುತ್ತಿವೆ. ಇದರಲ್ಲಿ ಅಂತಾರಾಜ್ಯ ಸರ್ವೀಸ್ ನಡೆಸುವವುಗಳೂ ಒಳಗೊಂಡಿವೆ. ಈ ಪೈಕಿ ಎಷ್ಟು ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಲಾಗು ವುದೆಂದು ಇನ್ನಷ್ಟೇ ಆದೇಶ ಲಭಿಸಬೇಕಾಗಿದೆ ಎಂದು ಡಿಪ್ಪೋದ ಅಧಿಕಾರಿಗಳು ತಿಳಿಸಿದ್ದಾರೆ.







