ಫ್ಯಾಮಿಲಿ ಹೆಲ್ತ್ ಸೆಂಟರ್‌ನ ಆರೋಗ್ಯವೇ ಹದಗೆಟ್ಟಿದೆ: ರೋಗಿಗಳಿಗೆ ದಿನನಿತ್ಯ ಸಂಕಷ್ಟ

ಕುಂಬಳೆ: ಪಂಚಾಯತ್‌ನಲ್ಲಿರುವ ಸುಮಾರು 75ವರ್ಷ ಹಳೆಯದಾದ ಸರಕಾರಿ ಆಸ್ಪತ್ರೆ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್‌ನಿಂದ ರೋಗಿಗಳಿಗೆ ಸಂಕಷ್ಟ ಎಂಬ ಆರೋಪವುಂಟಾಗಿದೆ. ಈ ಮೊದಲು ಇದು ಕಮ್ಯೂನಿಟಿ ಹೆಲ್ತ್ ಸೆಂಟರ್ ಆಗಿತ್ತು. ಕಳೆದ ವರ್ಷ ಇದನ್ನು ಬ್ಲೋಕ್ ಫ್ಯಾಮಿಲಿ ಹೆಸ್ತ್ ಸೆಂಟರ್ ಆಗಿ ಭಡ್ತಿಗೊಳಿಸಲಾಗಿತ್ತು. ಆದರೆ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಈ ಆರೋಗ್ಯ ಕೇಂದ್ರ ಎರಡು ದಶಕಗಳಿಂದ ಅವಗಣನೆ ಯನ್ನು ಎದುರಿಸುತ್ತಿದೆ. ಹಳೆಯದಾದ ಹೆಂಚು ಹಾಸಿದ ಕಟ್ಟಡದಲ್ಲಿ ಆಸ್ಪತ್ರೆ ಈಗಲೂ ಕಾರ್ಯಾಚರಿಸುತ್ತಿದೆ.

ಇದರಲ್ಲಿ ಒಂದು ಕಟ್ಟಡ ಸೋರುತ್ತಿದ್ದು, ಮೇಲ್ಛಾವಣಿ ಜೀರ್ಣಗೊಂಡು ಕಳೆದ ವರ್ಷ ಇದನ್ನು ಮುಚ್ಚಲಾಗಿದೆ. ಇದರಿಂದಾಗಿ ಅಸೌಕರ್ಯದ ಕೊರತೆ ಇಲ್ಲಿ ದಿನಂಪ್ರತಿ ಉಸಿರುಗಟ್ಟಿಸುತ್ತಿದೆ. ಇಲ್ಲಿಗೆ ತಲುಪುವ ರೋಗಿಗಳಿಗೆ ನಿಂತುಕೊಳ್ಳಲು ಕೂಡಾ ಸರಿಯಾದ ಸ್ಥಳವಿಲ್ಲ. ಮೀನು ಕಾರ್ಮಿಕರು, ಕೃಷಿಕರು ಹೆಚ್ಚಾಗಿ ಒಳಗೊಂಡಿರುವ ಪ್ರದೇಶದ ಜನರು ಆಶ್ರಯಿಸುವ ಕುಂಬಳೆಯ ಏಕ ಸರಕಾರಿ ಸಂಸ್ಥೆಯಾಗಿದೆ ಇದು. ದಿನಂಪ್ರತಿ ೩೦೦ಕ್ಕೂ ಅಧಿಕ ರೋಗಿಗಳು ಇಲ್ಲಿಗೆ ತಲುಪುತ್ತಿದ್ದಾರೆ.

ಆದರೆ ಇಷ್ಟಕ್ಕೇ ಇಲ್ಲಿ ಮೂಲ ಭೂತ ಸೌಕರ್ಯಗಳಿಲ್ಲ. ಆಸ್ಪತ್ರೆಯಲ್ಲಿ ಅಗತ್ಯಕ್ಕೆ ಡಾಕ್ಟರ್‌ಗಳು, ನೌಕರರು ಇಲ್ಲದಿರುವುದು ಕೂಡಾ ರೋಗಿಗಳಿಗೆ ಸಂಕಷ್ಟ ಉಂಟುಮಾಡಿದೆ. ಡಾಕ್ಟರ್ ಇಲ್ಲದ ಕಾರಣ ಹೆಚ್ಚಿನ ದಿನಗಳಲ್ಲಿ ಒಪಿ ವಿಭಾಗ ಮೊಟಕಾ ಗುತ್ತಿದೆ. ಇದರಿಂದ ದೂರ ಸ್ಥಳದಿಂದ ಬರುವ ರೋಗಿಗಳು ಕೂಡಾ ಬರಿಗೈಯಲ್ಲಿ ಹಿಂತಿರುಗಬೇಕಾಗುತ್ತಿದೆ.

ಲ್ಯಾಬ್, ಫಾರ್ಮಸಿಯಲ್ಲಿ ನೌಕರರು ಇಲ್ಲದ ಕಾರಣ ಟೆಸ್ಟ್, ಔಷಧಿ ವಿತರಣೆ ವಿಳಂಬವಾಗುತ್ತಿದೆ. ವಿಶಾಲವಾದ ಆಸ್ಪತ್ರೆ ಕಟ್ಟಡ ಪುನರ್ ನಿರ್ಮಿಸುವುದಕ್ಕೆ ಈ ಮೊದಲು ೨೦೨೩-೨೪ನೇ ವರ್ಷದ ವಿತ್ತೀಯ ಕಮಿಷನ್‌ನಲ್ಲಿ ಸೇರಿಸಿಕೊಂಡಿ ರುವುದಾಗಿ ಪ್ರೊಪೋಸಲ್ ಸಮರ್ಪಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ೪.೩೬ ಕೋಟಿ ರೂ. ಮಂಜೂರು ಮಾಡಿರುವುದಾಗಿ ಹೇಳಲಾಗುತ್ತಿದ್ದರೂ ಇದಕ್ಕೂ ಯಾವುದೇ ಕ್ರಮ ಉಂಟಾಗಲಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವ ಕೆ. ಮುರಳೀಧರನ್‌ರ ಗಮನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಂದಿದ್ದಾರೆ. ಕೂಡಲೇ ಕ್ರಮ ಉಂಟಾಗಬಹುದೆಂಬ ನಿರೀಕ್ಷೆ ಇಲ್ಲಿನವರಲ್ಲಿದೆ.

RELATED NEWS

You cannot copy contents of this page