ಹೊಸಂಗಡಿ ಲಾಡ್ಜ್‌ಗೆ ಪೊಲೀಸ್ ದಾಳಿ: ಎಂಡಿಎಂಎ, ಗಾಂಜಾ ಸಹಿತ ಇಬ್ಬರ ಸೆರೆ

ಉಪ್ಪಳ: ಹೊಸಂಗಡಿಯ ಲಾಡ್ಜ್‌ವೊಂದರಿಂದ ಮಂಜೇಶ್ವರ ಪೊಲೀಸರು ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಮಚ್ಚಂಪಾಡಿ ಪಳ್ಳ ಗುಡ್ಡೆ ಹೌಸ್‌ನ ಅಹಮ್ಮದ್ ಸೈಫುದ್ದೀನ್ (21), ಹೊಸಬೆಟ್ಟು ಗುಡ್ಡೆಕೇರಿ ನಿವಾಸಿ ಮುಹಮ್ಮದ್ ಮುಶ್ತಾಕ್ (36) ಎಂಬಿವರನ್ನು ಮಂಜೇಶ್ವರ ಎಸ್‌ಐ ಉಮೇಶ್ ಕೆ.ಆರ್. ನೇತೃ ತ್ವದ ಪೊಲೀಸ್ ತಂಡ ಬಂಧಿಸಿದೆ.

ಲಾಡ್ಜ್ ಕೊಠಡಿಯ ಹಾಸಿಗೆಯಲ್ಲಿ ತಲೆದಿಂಬಿನ ಅಡಿ ಭಾಗದಲ್ಲಿ ಬಚ್ಚಿಟ್ಟಿದ್ದ 1.61 ಗ್ರಾಂ ಎಂಡಿಎಂಎ ಹಾಗೂ 38.33 ಗ್ರಾಂ  ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ ಲಾಡ್ಜ್ ಕೊಠಡಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಸೆರೆಗೀಡಾದ ಅಹಮ್ಮದ್ ಸೈಫುದ್ದೀನ್ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎರಡು ಕೇಸುಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಒಂದು ಪ್ರಕರಣ ಎಂಡಿಎಂಎ ಬಳಸಿದಕ್ಕೆ ಸಂಬಂಧ, ಇನ್ನೊಂದು ಪ್ರಕರಣ ಕೈವಶವಿರಿಸಿದ್ದ ಸಂಬಂಧ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page